ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಟನ್‌ನಲ್ಲಿ 10ರ ಬಾಲಕಿಯರೇ ಹೆಚ್ಚು ಗರ್ಭಿಣಿಯರಾಗುತ್ತಿದ್ದಾರಂತೆ! (pregnant | England | UK | sexualisation | University)
Bookmark and Share Feedback Print
 
ಶಾಲೆಗೆ ಹೋಗುವ ಹತ್ತರ ಹರೆಯದ ಬಾಲಕಿಯರು ಗರ್ಭಿಣಿಯರಾಗಿರುವ ಆಘಾತಕಾರಿ ಅಂಶ ಬ್ರಿಟನ್‌ನಲ್ಲಿ ನಡೆಸಿದ ನೂತನ ಸಮೀಕ್ಷೆಯೊಂದರ ಅಂಕಿ-ಅಂಶ ಬಹಿರಂಗಪಡಿಸಿದೆ.

ಫ್ರೀಡಂ ಆಫ್ ಇನ್‌ಫೋರ್ಮೆಷನ್ ನಡೆಸಿರುವ ಸಮೀಕ್ಷೆಯ ಪ್ರಕಾರ, ಕಳೆದ ಎಂಟು ವರ್ಷಗಳಲ್ಲಿ ಹತ್ತರ ಹರೆಯದ 15 ಹಾಗೂ 11ರ ಹರೆಯದ ಸುಮಾರು 39 ಬಾಲಕಿಯರು ಗರ್ಭಿಣಿಯರಾಗಿರುವ ಅಂಶ ಬಹಿರಂಗಗೊಂಡಿದೆ. ಅಲ್ಲದೇ, ಪ್ರತಿ ವರ್ಷ ಇಂಗ್ಲೆಂಡ್ ಮತ್ತು ವಾಲ್ಸೆ‌ನಲ್ಲಿ 13ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಸುಮಾರು 300ಮಂದಿ ಬಾಲಕಿಯರು ಗರ್ಭ ಧರಿಸುತ್ತಾರೆಂದು ಸಮೀಕ್ಷೆ ವಿವರಿಸಿದೆ.

2002ರ ನಂತರ ಸುಮಾರು 15ರ ಹರೆಯದ 63,487ಬಾಲಕಿಯರು ಗರ್ಭಿಣಿಯರಾಗಿದ್ದರು. ಅಂದರೆ ಪ್ರತಿದಿನ ಸರಾಸರಿ 15ರ ಹರೆಯದ 23ಬಾಲಕಿಯರು ಗರ್ಭಿಣಿಯರಾಗಿರುವುದಾಗಿ ಸಮೀಕ್ಷೆ ಅಂಕಿ-ಅಂಶ ತಿಳಿಸಿದೆ.

'ನಿಜಕ್ಕೂ ಈ ಅಂಕಿ ಅಂಶ ದುರಂತವನ್ನು ತೋರಿಸುತ್ತದೆ' ಎಂದು ಕೆಂಟ್ ಯೂನಿರ್ವಸಿಟಿಯ ಸಮಾಜಶಾಸ್ತ್ರ ಪ್ರೊ.ಫ್ರಾಂಕ್ ಫುರೆಡಿ ಆತಂಕ ವ್ಯಕ್ತಪಡಿಸಿದ್ದಾರೆ. ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳು ಲೈಂಗಿಕ ಆಸಕ್ತಿಯಲ್ಲಿ ಹೆಚ್ಚಾಗಿ ತೊಡಗುತ್ತಿರುವುದು ಇದರಿಂದ ಸಾಬೀತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ