ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನಿಸ್ತಾನ: ಹಿಮಬಂಡೆ ಕುಸಿತಕ್ಕೆ 150 ಬಲಿ (avalanches | Afghanistan | Kabul | Xinhua)
Bookmark and Share Feedback Print
 
ಅಫ್ಘಾನಿಸ್ತಾನದ ಉತ್ತರ ಭಾಗದಲ್ಲಿ ವಿಪರೀತವಾಗಿ ಸುರಿಯುತ್ತಿರುವ ಹಿಮಪಾತ ಹಾಗೂ ಹಿಮಬಂಡೆ ಕುಸಿತಕ್ಕೆ ಸುಮಾರು 150ಮಂದಿ ಸಾವನ್ನಪ್ಪಿರುವುದಾಗಿ ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.

ಹಿಮಬಂಡೆ ಕುಸಿತದಿಂದಾಗಿ ಈಗಾಗಲೇ ಸುಮಾರು 150ಮಂದಿ ಸಾವನ್ನಪ್ಪಿರುವುದಾಗಿ ಕ್ಸಿನ್‌ಹುವಾ ಪಾರ್‌ವಾನ್ ಪ್ರಾಂತ್ಯದ ಗವರ್ನರ್ ಮೊಹಮ್ಮದ್ ಬಸಿರ್ ತಿಳಿಸಿರುವುದಾಗಿ ಹೇಳಿದ್ದು, ಹೆಚ್ಚಿನವರು ಹಿಮಪಾತದೊಳಗೆ ಸಮಾಧಿಯಾಗಿ ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಕಾಬೂಲ್‌ನಿಂದ 90ಕಿ.ಮೀ.ದೂರದಲ್ಲಿರುವ ಸಾಲಾಂಗ್ ಪಾಸ್‌ ಪ್ರಾಂತ್ಯದಲ್ಲಿ ಸೋಮವಾರದಿಂದ ಹಿಮಪಾತ ಸುರಿಯುತ್ತಿದೆ. ಅಲ್ಲದೇ, ಹಿಮಪಾತದಲ್ಲಿ ಹೂತು ಹೋಗಿರುವ ಜನರಿಗಾಗಿ ಆರೋಗ್ಯ ಸಚಿವಾಲಯ ಮತ್ತು ಅಫ್ಘಾನ್ ರಾಷ್ಟ್ರೀಯ ಭದ್ರತಾ ಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ