ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಕಿಮುಲ್ಲಾ ಸಾವನ್ನಪ್ಪಿರುವು ಖಚಿತ: ಪಾಕ್ ದೃಢ (Karachi | Tehreek-e-Taliban Pakistan | Hakimullah)
Bookmark and Share Feedback Print
 
ಪಾಕಿಸ್ತಾನದ ತೆಹ್ರೀಕ್ ಇ ತಾಲಿಬಾನ್ ವರಿಷ್ಠ ಹಕಿಮುಲ್ಲಾ ಮೆಹ್ಸೂದ್ ಸಾವನ್ನಪ್ಪಿರುವುದಾಗಿ ಪಾಕಿಸ್ತಾನ ಆಂತರಿಕ ಸಚಿವ ರೆಹಮಾನ್ ಮಲಿಕ್ ಬುಧವಾರ ಖಚಿತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ ನಡೆಸಿದ ದಾಳಿಯಲ್ಲಿ ಹಕಿಮುಲ್ಲಾ ಸಾವನ್ನಪ್ಪಿರುವುದು ಖಚಿತ ಎಂದರಲ್ಲದೇ, ಆತ್ಮಹತ್ಯಾ ಬಾಂಬ ತಯಾರಿಕೆ ತಜ್ಞ ಖ್ವಾರಿ ಹುಸೈನ್ ಕೂಡ ಈ ಸಂದರ್ಭದಲ್ಲಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಹಕಿಮುಲ್ಲಾ ಸಾವನ್ನಪ್ಪಿಲ್ಲ ಎಂದೇ ತಾಲಿಬಾನ್ ಸ್ಪಷ್ಟನೆ ನೀಡುತ್ತಲೇ ಬಂದಿತ್ತು. ಆದರೆ ಕಳೆದ ತಿಂಗಳು ನಡೆದ ದಾಳಿಯಲ್ಲಿ ಹಕಿಮುಲ್ಲಾ ಸಾವನ್ನಪ್ಪಿರುವುದಾಗಿ ಸ್ವತಃ ತೆಹ್ರೀಕ್ ಇ ತಾಲಿಬಾನ್ ಖಚಿತಪಡಿಸಿತ್ತು. ಆ ನಿಟ್ಟಿನಲ್ಲಿ ಟಿಟಿಪಿಗೆ ಈಗ ನೂರ್ ಜಮಾಲ್ ಮುಖ್ಯಸ್ಥನಾಗಿ ನೇಮಕಗೊಂಡಿರುವುದಾಗಿಯೂ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ