ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಂದಿದೆ ಬೆತ್ತಲೆ ಚಿತ್ರ ತೋರಿಸದ ನೂತನ ಬಾಡಿ ಸ್ಕ್ಯಾನರ್ (New 3D scanner | airports | body parts | terror threats)
Bookmark and Share Feedback Print
 
ಭಯೋತ್ಪಾದಕರ ಸತತ ಬೆದರಿಕೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಇಡೀ ದೇಹವನ್ನು ಸಂಪೂರ್ಣ ತಪಾಸಣೆಗೊಳಪಡಿಸುವುದು ಕಡ್ಡಾಯವಾಗುತ್ತಿದ್ದಂತೆ ಪ್ರಯಾಣಿಕರ ಖಾಸಗಿತನಕ್ಕೆ ಭಂಗ ಬಾರದಂತೆ ದೇಹದ ಯಾವುದೇ ಭಾಗಗಳನ್ನು ತೋರಿಸದೆ, ಕೇವಲ ವಸ್ತುಗಳನ್ನು ಮಾತ್ರ ತೋರಿಸುವ ನೂತನ 3ಡಿ ಸ್ಕ್ಯಾನರ್ ಒಂದನ್ನು ಸಂಶೋಧಿಸಲಾಗಿದೆ.
PTI


ಮೋಂಟ್ರಿಯಲ್ ಮೂಲದ ವಿಲಿಯಮ್ ಅವೇಡ್ ಎಂಬವರು ಈ ಸ್ಕ್ಯಾನರ್ ಸಂಶೋಧನೆ ಮಾಡಿದ್ದಾರೆ. ಇದು ಬಟ್ಟೆಯೊಳಗಿನ ದೇಹದ ರೇಖಾಚಿತ್ರವನ್ನು ತೋರಿಸುವ ಬದಲು ಕೇವಲ ಲೋಹ ಮತ್ತು ಇತರ ಅಪಾಯಕಾರಿ ಸಲಕರಣೆಗಳನ್ನು ಮಾತ್ರ ತೋರಿಸುತ್ತದೆ ಎಂದು ವರದಿಗಳು ಹೇಳಿವೆ.

ಪ್ರಸಕ್ತ ವಿಮಾನ ನಿಲ್ದಾಣಗಳಲ್ಲಿರುವ ಸ್ಕ್ಯಾನರುಗಳು ಮಾನವ ದೇಹದ 3ಡಿ ರೇಖಾಚಿತ್ರಗಳನ್ನು ನೀಡುತ್ತಿವೆ. ಇದು ಖಾಸಗಿತನಕ್ಕೆ ಎಸಗಲಾಗುತ್ತಿರುವ ಅಪಚಾರ ಎಂಬ ಕೂಗು ಹೆಚ್ಚುತ್ತಿದೆ.

ಅಲ್‌ಖೈದಾ ಭಯೋತ್ಪಾದಕ ಸಂಘಟನೆಯ ನೈಜೀರಿಯಾ ಸದಸ್ಯ ಕ್ರಿಸ್ಮಸ್ ದಿನದಂದು ಡೆಟ್ರಾಯಿಟ್ ವಿಮಾನ ನಿಲ್ದಾಣದಲ್ಲಿ ಅಮೆರಿಕಾ ವಿಮಾನವನ್ನೇರಿ ಬಾಂಬ್ ಸ್ಫೋಟಿಸುವ ವಿಫಲ ಯತ್ನ ನಡೆಸಿದ ನಂತರ ಉತ್ತರ ಅಮೆರಿಕಾ ಮತ್ತು ಯೂರೋಪಿಯನ್ ವಿಮಾನ ನಿಲ್ದಾಣಗಳು ಭಾರೀ ವಿರೋಧದ ನಡುವೆಯೂ ದೈಹಿಕ ಶೋಧ ಮತ್ತು ಬಟ್ಟೆ ಬಿಚ್ಚಿ ತಪಾಸಣೆ ನಡೆಸುವ ವಿಧಾನವನ್ನು ಅನುಸರಿಸುತ್ತಿವೆ. ಇದಕ್ಕೆ ನೂತನ ಯಂತ್ರವು ಪರಿಹಾರ ಒದಗಿಸಲಿದೆ ಎಂದು ಹೇಳಲಾಗುತ್ತಿದೆ.

ಪ್ರಸಕ್ತ ಇರುವ ಯಂತ್ರಗಳಿಗಿಂತ ನೂತನ 3ಡಿ ಸ್ಕ್ಯಾನರ್ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ. ಇದು ಸೂಟ್‌ಕೇಸ್‌ಗಳ ಒಳಗಿನ ನಿಗೂಢ ಸ್ಥಳಗಳನ್ನು ಕೂಡ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಪ್ರಸಕ್ತ ಯಂತ್ರಗಳಿಗೆ ಇದು ಸಾಧ್ಯವಾಗುತ್ತಿಲ್ಲ.

ಪ್ರಾಯೋಗಿಕ ಪರೀಕ್ಷೆ ಸಂದರ್ಭದಲ್ಲಿ ಪ್ರಸಕ್ತ ಯಂತ್ರಗಳು ಪತ್ತೆ ಹಚ್ಚಲು ವಿಫಲವಾದ ಸ್ಫೋಟಕದ ಅಂಶಗಳನ್ನು ನೂತನ ಸ್ಕ್ಯಾನರ್ ಪತ್ತೆ ಹಚ್ಚಿದೆ. ಹಾಗಾಗಿ ಇದರ ಕುರಿತು ಅಮೆರಿಕಾ ಸರಕಾರವು ಗಂಭೀರವಾಗಿ ಪರಿಗಣಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಸಂಬಂಧಿತ ಮಾಹಿತಿ ಹುಡುಕಿ