ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೈಟಿ ಭೂಕಂಪ: ಸಾವಿನ ಸಂಖ್ಯೆ 217,000ಕ್ಕೆ ಏರಿಕೆ (Red Cross | Haiti quake | Caribbean nation | Port-au-Prince,)
Bookmark and Share Feedback Print
 
ಕೆರೆಬಿಯನ್ ರಾಷ್ಟ್ರವಾದ ಹೈಟಿಯಲ್ಲಿ ಕಳೆದ ತಿಂಗಳು ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 217,000ಲಕ್ಷಕ್ಕೆ ಏರಿರುವುದಾಗಿ ಬುಧವಾರ ಅಧಿಕಾರಿಗಳು ತಿಳಿಸಿದ್ದು, ಇದೀಗ ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ತಾತ್ಕಾಲಿಕ ಟೆಂಟ್ ನಿರ್ಮಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಭೂಕಂಪದಿಂದ ಹೈಟಿ ತತ್ತರಿಸಿ ಹೋಗಿದ್ದು, ಸುಮಾರು 230,000ಸಾವನ್ನಪ್ಪಿರುವ ಬಗ್ಗೆ ಮಾಹಿತಿ ದೊರೆತಿದೆ. ಆದರೆ ಸಾವಿನ ಅಂಕಿ-ಅಂಶದ ಬಗ್ಗೆ ಇನ್ನಷ್ಟೇ ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ಆಂತರಿಕ ಸಚಿವ ಪೌಲ್ ಬೈನ್ ಐಮೆ ತಿಳಿಸಿದ್ದಾರೆ.

ಹೈಟಿಯನ್ನೇ ತಲ್ಲಣಗೊಳಿಸಿದ ಭೀಕರ ಭೂಕಂಪ ಸಂಭವಿಸಿದ ಒಂದು ತಿಂಗಳು ಕಳೆದ ಹಿನ್ನೆಲೆಯಲ್ಲಿ ಶುಕ್ರವಾರ ಸಂತಾಪ ಸೂಚಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ.

ಭೂಕಂಪದಿಂದಾಗಿ ಸುಮಾರು 1.2ಮಿಲಿಯನ್ ಜನರು ಮನೆ, ಆಸ್ತಿ-ಪಾಸ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ಬ್ರಿಟನ್ ರೆಡ್ ಕ್ರಾಸ್ ಸಂಸ್ಥೆಯ ಡೇವಿಡ್ ಪಾಪ್ಪಿಯಟ್ ತಿಳಿಸಿದ್ದಾರೆ. ಹೈಟಿಯಲ್ಲಿನ ಜನರ ಹಿತಕ್ಕಾಗಿ 23ದೇಶಗಳ ರೆಡ್ ಕ್ರಾಸ್ ಸಂಸ್ಥೆಯ ಪ್ರತಿನಿಧಿಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದಾಗಿ ವಿವರಿಸಿದ್ದಾರೆ.

ಮುಂಬರುವ ಮಳೆಗಾಲದೊಳಗೆ ನಿರಾಶ್ರಿತರಾದವರಿಗೆ ತಾತ್ಕಾಲಿಕ ಮನೆ ನಿರ್ಮಿಸಿ ಕೊಡಲು ಸಾಕಷ್ಟು ಶ್ರಮಿಸಲಾಗುತ್ತಿದೆ. ಅಲ್ಲದೇ ಮನೆ ನಿರ್ಮಾಣದ ಕಾರ್ಯ ಪೂರ್ಣಗೊಳ್ಳಲು ಮೂರರಿಂದ ಐದು ವರ್ಷಗಳ ಕಾಲದ ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಡೇವಿಡ್ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ