ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫೇಸ್‌ಬುಕ್‌‌ನ ಅತಿ ಜನಪ್ರಿಯರಲ್ಲಿ ಮುಶರಫ್ ಕೂಡ ಒಬ್ಬರಂತೆ! (Facebook | Pakistani president | Pervez Musharraf | Asif Ali Zardari)
Bookmark and Share Feedback Print
 
ಸಾಮಾಜಿಕ ಸಂಪರ್ಕ ತಾಣ 'ಫೇಸ್‌ಬುಕ್'ನಲ್ಲಿ ಜನಪ್ರಿಯವಾಗಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಶರಫ್‌ರನ್ನು 'ಶ್ರೇಷ್ಠ ಸ್ನೇಹ ಸಂಪಾದಕ' ಎಂದು ಸಿಎನ್ಎನ್ ಘೋಷಿಸಿದೆ.

ಫೇಸ್‌ಬುಕ್‌ನಲ್ಲಿರುವ ಜನಪ್ರಿಯ ವ್ಯಕ್ತಿಗಳಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಶರಫ್ ಕೂಡ ಒಬ್ಬರಾಗುತ್ತಿದ್ದಾರೆ. ಅವರ ಫೇಸ್‌ಬುಕ್ ವೈಯಕ್ತಿಕ ಪುಟದಲ್ಲಿ 1,27,000ಕ್ಕೂ ಹೆಚ್ಚು ಅಭಿಮಾನಿಗಳಿದ್ದಾರೆ. ಅಲ್ಲದೆ ಅವರು ನಿರಂತರವಾಗಿ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾ, ತನ್ನ ಚಟುವಟಿಕೆಗಳ ವಿವರಣೆಯನ್ನು ಆಗಾಗ ನೀಡುತ್ತಿರುತ್ತಾರೆ ಎಂದು 'ಸಿಎನ್ಎನ್.ಕಾಮ್' ತನ್ನ ವರದಿಯಲ್ಲಿ ತಿಳಿಸಿದೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಫೇಸ್‌ಬುಕ್‌ಗೆ ಸೇರಿದ್ದ ಮುಶರಫ್ ಪ್ರಸಕ್ತ ಅದರಲ್ಲಿರುವ ಅತಿ ಶ್ರೇಷ್ಠರಲ್ಲೊಬ್ಬರಾಗಿದ್ದಾರೆ. 2008ರ ಆಗಸ್ಟ್ ತಿಂಗಳಲ್ಲಿ ಪದಚ್ಯುತಿ ತಪ್ಪಿಸಿಕೊಳ್ಳಲು ಸ್ಥಾನ ತ್ಯಜಿಸಿದ್ದ ಅವರು ಈಗ ವಿದೇಶದಲ್ಲಿ ನೆಲೆಸಿದ್ದಾರೆ.

ಅವರ ಪುಟದಲ್ಲಿರುವ ಅಭಿಮಾನಿಗಳಲ್ಲಿ ಸುಮಾರು ಒಂದು ಲಕ್ಷದಷ್ಟು ಪಾಕಿಸ್ತಾನಿಯರು. ಉಳಿದಂತೆ ಫೆಬ್ರವರಿ ಒಂದರ ತನಕದ ಲೆಕ್ಕಾಚಾರ ನೋಡುವುದಾದರೆ 629 ಭಾರತೀಯ ಅಭಿಮಾನಿಗಳಿದ್ದಾರೆ. ಅವರಲ್ಲಿ 258 ಮಂದಿ ನವದೆಹಲಿಯವರು ಎಂದು ವರದಿ ಹೇಳಿದೆ.

ತನ್ನ ಅಭಿಮಾನಿಗಳು ಹಾಗೂ ಹಿಂಬಾಲಕರು ಕೇಳುವ ಬಹುತೇಕ ಪ್ರಶ್ನೆಗಳಿಗೆ ಮುಶರಫ್ ಇಲ್ಲಿ ಉತ್ತರಿಸುತ್ತಿದ್ದಾರೆ.

ರಾಷ್ಟ್ರೀಯ ವ್ಯಾಜ್ಯ ನಿವಾರಣಾ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಪಾಕಿಸ್ತಾನಿ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿಯವರಿಗೆ ಕ್ಷಮಾದಾನ ಸಿಗುವಂತೆ ಮಾಡಿದ್ದು ನಾನು ಮಾಡಿದ್ದ ತಪ್ಪು ಎಂದು ಸಹ ಅವರು ಮೊದಲು ಒಪ್ಪಿಕೊಂಡದ್ದು ಫೇಸ್‌ಬುಕ್ ವೆಬ್‌ಸೈಟಿನಲ್ಲಿ ಎಂಬುದು ಕುತೂಹಲಕಾರಿ ಅಂಶ.

ಅಮೆರಿಕಾ ಮಿಲಿಟರಿ ಸಿಬ್ಬಂದಿಯನ್ನು ಕೊಲ್ಲಲು ಯತ್ನಿಸಿದ ಆರೋಪ ಸಾಬೀತಾಗಿ ಪಾಕಿಸ್ತಾನಿ ಪ್ರಜೆ ಆಫಿಯಾ ಸಿದ್ಧಿಕಿಯವರಿಗೆ ಶಿಕ್ಷೆ ಪ್ರಕಟವಾದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಮುಶರಫ್‌ರನ್ನು ಫೇಸ್‌ಬುಕ್‌ನಲ್ಲಿ ಹಲವರು ಪ್ರಶ್ನಿಸಿದ್ದರು. ಮುಶರಫ್ ಆಡಳಿತಾವಧಿಯಲ್ಲಿ ಸಿದ್ಧಿಕಿಯವರನ್ನು ಅಮೆರಿಕಾಕ್ಕೆ ಹಸ್ತಾಂತರಿಸಲಾಗಿತ್ತು ಎಂದು ವಾದಿಸಲಾಗಿತ್ತು. ಆದರೆ ಇದನ್ನು ತಳ್ಳಿ ಹಾಕಿರುವ ಅವರು, ಸಿದ್ಧಿಕಿ ಪ್ರಕರಣದಲ್ಲಿ ನನ್ನದೇನೂ ಪಾತ್ರವಿಲ್ಲ. ಆಕೆಯ ಬಂಧನ ಮತ್ತು ಅಮೆರಿಕಾಕ್ಕೆ ಹಸ್ತಾಂತರಿಸಿದ ಕುರಿತೂ ನನಗೆ ಗೊತ್ತಿರಲಿಲ್ಲ ಎಂದು ತನ್ನ ಪುಟದಲ್ಲಿ ಉತ್ತರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ