ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಶ್ಮೀರ ವಿವಾದದಿಂದ ನುಣುಚಿಕೊಳ್ಳಲು ಭಾರತ ಯತ್ನಿಸುತ್ತಿದೆ: ಪಾಕ್ (India | Kashmir issue | Pakistan | Yousuf Raza Gilani)
Bookmark and Share Feedback Print
 
ಭಾರತವು ಕಾಶ್ಮೀರ ವಿವಾದದ ಕುರಿತು ನುಣುಚಿಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನ, ಮುಂಬರುವ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯಲ್ಲಿ ಇದನ್ನು ಸೇರಿಸುವಂತೆ ಒತ್ತಾಯಿಸಿದೆ. ಅಲ್ಲದೆ ಕಾಶ್ಮೀರ ಸೇರಿದಂತೆ ಎಲ್ಲಾ ಪರಿಹಾರವಾಗದ ಸಮಸ್ಯೆಗಳ ಮಾತುಕತೆಯಿಂದ ಮಾತ್ರ ಉತ್ತಮ ನಾವು ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯ ಎಂದಿದೆ.

ಅವರು ಕಾಶ್ಮೀರ ವಿಚಾರದ ಕುರಿತು ಮಾತುಕತೆ ನಡೆಸಲು ಸಿದ್ಧರಿಲ್ಲ ಎಂದು ಅಧಿಕೃತ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನ ಅಧ್ಯಕ್ಷ ಯೂಸುಫ್ ರಾಜಾ ಗಿಲಾನಿ ತಿಳಿಸಿದ್ದಾರೆ.

ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯ ಕುರಿತು ಭಾರತ ನೀಡಿರುವ ಆಹ್ವಾನದ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು. ಈಗಲೇ ಪೂರ್ಣ ಪ್ರಮಾಣದ ಮಾತುಕತೆಗೆ ಭಾರತ ಹಿಂದೇಟು ಹಾಕುತ್ತಿರುವ ಭಾರತಕ್ಕೆ ಸ್ಪಷ್ಟಪಡಿಸಿದ ಅವರು, ಮುಂಬೈ ದಾಳಿಯ ನಂತರ ಸ್ಥಗಿತಗೊಂಡಿದ್ದ ಉಭಯ ದೇಶಗಳ ನಡುವಿನ ಮಾತುಕತೆಯಲ್ಲಿ ಕಾಶ್ಮೀರ ಸೇರಿದಂತೆ ಭಾರತ-ಪಾಕಿಸ್ತಾನಗಳ ಎಂಟು ಸಮಸ್ಯೆಗಳ ಪರಿಹಾರದಿಂದ ಮಾತ್ರ ನಾವು ಶಾಂತಿಯನ್ನು ಕಂಡುಕೊಳ್ಳಬಹುದಾಗಿದೆ ಎಂದರು.

ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿ ಶಾಹಿದ್ ಮಲಿಕ್ ಮತ್ತು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ನವದೆಹಲಿಯಲ್ಲಿ ಮಾತುಕತೆ ನಡೆಸುತ್ತಿದ್ದು, ಉಭಯ ದೇಶಗಳ ಅಧಿಕಾರಿಗಳು ಭೇಟಿಯ ದಿನದ ಕುರಿತು ಸಂಪರ್ಕದಲ್ಲಿದ್ದಾರೆ ಎಂದು ಗಿಲಾನಿ ತಿಳಿಸಿದ್ದಾರೆ.

ನಿರುಪಮಾ ರಾವ್ ಅವರು ಫೆಬ್ರವರಿ 18 ಮತ್ತು 25ರಂದು ಮಾತುಕತೆಗೆ ಸಿದ್ಧ ಎಂದು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ಅವರಿಗೆ ತಿಳಿಸಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿಯವರು ಫೆಬ್ರವರಿ 25ರಂದು ಮಾತುಕತೆ ನಡೆಸುವುದು ಪಾಕಿಸ್ತಾನಕ್ಕೆ ಸೂಕ್ತ ಎಂದಿದ್ದಾರೆ. ಇದೊಂದು ಕೆಟ್ಟ ದಿನಾಂಕವಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಪಾಕಿಸ್ತಾನ ಮೂಲದಿಂದ ಹುಟ್ಟುತ್ತಿರುವ ಭಯೋತ್ಪಾದನೆಯ ಕುರಿತು ಭಾರತವು ಮಾತುಕತೆ ಸಂದರ್ಭದಲ್ಲಿ ತನ್ನ ತೀವ್ರ ಕಳವಳವನ್ನು ವ್ಯಕ್ತಪಡಿಸಲಿದೆ ಎಂದು ಭಾರತ ಈಗಾಗಲೇ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ