ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾಜಿ ಪ್ರಿಯಕರನಿಗೆ ವಿಷ: ಭಾರತೀಯ ಮಹಿಳೆಗೆ ಜೀವಾವಧಿ ಶಿಕ್ಷೆ! (Lakhvinder Cheema | Woman poisons lover | Indian,)
Bookmark and Share Feedback Print
 
ತನ್ನನ್ನು ಪ್ರೀತಿಸಿದಾತ ಇನ್ನೊಬ್ಬಳ ಬಾಹುಬಂಧನದಲ್ಲಿ ಇರುವುದನ್ನು ಸಹಿಸದ ಭಾರತೀಯ ಮೂಲದ ಮಹಿಳೆಯೊಬ್ಬಳು ತನ್ನ ಮಾಜಿ ಪ್ರಿಯಕರಿನಿಗೆ ವಿಷ ನೀಡಿ ಸಾಯಿಸಿದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದ್ದು, ಇದೊಂದು ಬ್ರಿಟನ್‌ನಲ್ಲಿ 128ವರ್ಷಗಳ ಬಳಿಕ ನಡೆದ ಮೊದಲ ಅಪರೂಪದ ಘಟನೆಯಾಗಿದೆ.

ಪುರಾತನ ಕಾಲದಲ್ಲಿ ಬಳಸುತ್ತಿದ್ದ ಭಾರತೀಯ ವಿಷಯುಕ್ತ ಗಿಡಮೂಲಿಕೆಯೊಂದನ್ನು ಬಳಸಿ ತನ್ನ ಮಾಜಿ ಪ್ರಿಯಕರನಾದ ಲಕ್ವೀಂದರ್ ಚೀಮಾ(39) ಎಂಬಾತನನ್ನು ಮೂರು ಮಕ್ಕಳ ತಾಯಿಯಾಗಿರುವ ಲಖ್ವಿರ್ ಕೌರ್ ಸಿಂಗ್(40) ಎಂಬಾಕೆ ಕೊಲೆ ಮಾಡಿದ್ದಳು.
ಭಾರತದ ಪುರಾಣಗಳಲ್ಲಿ ಉಲ್ಲೇಖವಾಗಿರುವ ವಿಷಯುಕ್ತ ಗಿಡಮೂಲಿಕೆಯೊಂದರ ಪದಾರ್ಥವನ್ನು ಲಖ್ವಿರ್ ಚಾಣಾಕ್ಷತನದಿಂದ ಚೀಮಾ ದಂಪತಿಗಳಿಗೆ ನೀಡಿದ್ದಳು. ಆ ಪದಾರ್ಥ ಸೇವನೆಯ ನಂತರ ಇಬ್ಬರೂ ತೀವ್ರವಾಗಿ ಅಸ್ವಸ್ಥರಾಗಿದ್ದರು.

ಭಾರತೀಯ ಮೂಲದ ಅಕೋನೈಟ್ ವಿಷವನ್ನು 'ಕ್ವೀನ್ ಆಫ್ ಪಾಯಿಸನ್' ಎಂದೇ ಕರೆಯಲಾಗುತ್ತದೆ. ಇದು ಹಿಮಾಲಯದ ತಪ್ಪಲು ಪ್ರದೇಶದಲ್ಲಿ ದೊರೆಯುವ ಗಿಡಮೂಲಿಕೆಯಾಗಿದೆ. ಇದನ್ನು 'ಹಾಲಾಹಲ' ಎಂದೂ ಕೂಡ ಹೆಸರಿಸಲಾಗಿದೆ. ಸಮುದ್ರ ಮಥನ ಕಾಲದಲ್ಲಿ ಈ ಹಾಲಾಹಲವನ್ನು ಈಶ್ವರ ಸೇವಿಸಿದ್ದ ಪರಿಣಾಮ ಆತ ವಿಷಕಂಠನಾಗಿರುವುದಾಗಿ ಪುರಾಣಗಳಲ್ಲಿ ಉಲ್ಲೇಖವಾಗಿದೆ.

1882ರಲ್ಲಿ 18ರ ಹರೆಯದ ಯುವಕನೊಬ್ಬನನ್ನು ವಿಷವುಣಿಸಿ ಸಾಯಿಸಿದ ಅಪರೂಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಜಾರ್ಜ್ ಹೆನ್ರಿ ಲ್ಯಾಮಸನ್ ಎಂಬಾತನನ್ನು ಬ್ರಿಟನ್ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿತ್ತು.

ತನ್ನ ಪ್ರಿಯಕರನಾಗಿರುವ ಲಖ್ವಿಂದರ್ ಅಲಿಯಾಸ್ ಲಕ್ಕಿ ಗುರ್ಜೀತ್ ಜೊತೆ ಬಾಳುತ್ತಿರುವುದನ್ನು ನೋಡಿ ಲಖ್ವಿರ್ ಅಸೂಯೆಗೆ ಒಳಗಾಗಿದ್ದಳೆಂದು ಬುಧವಾರ ನ್ಯಾಯಾಲಯದ ವಿಚಾರಣೆ ವೇಳೆ ತಿಳಿಸಿದ್ದು, ಭಾರತದಿಂದ ಆ ಗಿಡಮೂಲಿಕೆಯನ್ನು ತರಿಸಿಕೊಂಡು, ಲಕ್ಕಿ ಮನೆಗೆ ಅದನ್ನು ಕೊಟ್ಟು ಪದಾರ್ಥಕ್ಕೆ ಹಾಕಿ ತಿನ್ನುವಂತೆ ಸಲಹೆ ನೀಡಿರುವುದಾಗಿ ವಿವರಿಸಿದ್ದಾಳೆ!

ಅದರಂತೆ ಲಖ್ವಿಂದರ್ ಚೀಮಾ ದಂಪತಿಗಳು ಯಾವುದೇ ಅನುಮಾನವಿಲ್ಲದೆ ಗಿಡಮೂಲಿಕೆ ಹಾಕಿ ಮಾಡಿದ ಪದಾರ್ಥವನ್ನು ಸೇವಿಸಿದ್ದರು. ಬಳಿಕ ಇಬ್ಬರೂ ತೀವ್ರ ಕೋಮಾ ಸ್ಥಿತಿಗೆ ತಲುಪಿದ್ದರು. ಕೂಡಲೇ ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಲಖ್ವಿಂದರ್ ಸಾವನ್ನಪ್ಪಿದ್ದ. ಕೋಮಾ ಸ್ಥಿತಿಗೆ ತಲುಪಿದ್ದ ಗುರ್ಜೀತ್ ಎರಡು ವರ್ಷಗಳ ಬಳಿಕ ಚೇತರಿಸಿಕೊಂಡಿದ್ದಳು.

ಲಖ್ವಿರ್ ಮತ್ತು ಲಖ್ವಿಂದರ್ ಇಬ್ಬರು ಕಳೆದ 15ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಲಖ್ವಿಂದರ್ ಕೊನೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಗುರ್ಜೀತ್‌ ಜೊತೆ. ಅಲ್ಲದೇ ಮದುವೆಯಾದ ನಂತರ ಲಖ್ವಿಂದರ್ ಬ್ರಿಟನ್‌ನಲ್ಲಿಯೇ ಮನೆ ಮಾಡಿ ಇರಬೇಕೆಂದು ಹೇಳಿದ್ದಳು. ಅದರಂತೆ ಆತ ಲಖ್ವಿರ್ ಮನೆ ಸಮೀಪವೇ ವಾಸ್ತವ್ಯ ಹೂಡಿದ್ದ.

ಮಾಜಿ ಪ್ರಿಯಕರನನ್ನು ವಿಷವುಣಿಸಿ ಕೊಂದ ಆರೋಪದ ಮೇಲೆ 2009ರ ಜನವರಿ 28ರಂದು ಲಖ್ವಿರ್‌ಳನ್ನು ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ವಿಷದ ಚಿಕ್ಕ ಪೊಟ್ಟಣ ಆಕೆಯ ಮನೆಯಲ್ಲಿ ಪೊಲೀಸರಿಗೆ ದೊರಕಿತ್ತು. ಇದೀಗ ನ್ಯಾಯಾಲಯ ಆಕೆಯನ್ನು ದೋಷಿ ಎಂದು ತೀರ್ಪು ನೀಡಿದೆ. ಆ ಹಿನ್ನೆಲೆಯಲ್ಲಿ ಲಖ್ವಿರ್ ಜೀವಾವಧಿ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ