ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಮ್ಮದೂ ನ್ಯೂಕ್ಲಿಯರ್ ದೇಶ: ಇರಾನ್ ಸ್ವಯಂ ಘೋಷಣೆ (Iran | Uranium | Ahmadinejad | Islamic republic | Ahmadinejad)
Bookmark and Share Feedback Print
 
ದೇಶದಲ್ಲಿ ಉತ್ಕೃಷ್ಟ ಗುಣಮಟ್ಟದ ಯೂರೇನಿಯಂ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಿದ ಎರಡು ದಿನಗಳ ಬಳಿಕ, ತಮ್ಮದು ನ್ಯೂಕ್ಲಿಯರ್ ರಾಷ್ಟ್ರ ಎಂಬುದಾಗಿ ಇರಾನ್ ಅಧ್ಯಕ್ಷ ಮೊಹಮದ್ ಅಹಮದಿನೇಜಾದ್ ಗುರುವಾರ ಅಧಿಕೃತವಾಗಿ ಘೋಷಿಸಿದ್ದಾರೆ.

ಇಸ್ಲಾಮಿಕ್ ರಿಪಬ್ಲಿಕ್‌ ಸ್ಥಾಪನೆಯ ವಾರ್ಷಿಕೋತ್ಸವದ ಬೃಹತ್ ಸಮಾರಂಭದಲ್ಲಿ ನೆರೆದಿದ್ದ ಸಹಸ್ರಾರು ಸಂಖ್ಯೆಯ ಇರಾನಿಯನ್‌ರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮದು ನ್ಯೂಕ್ಲಿಯರ್ ದೇಶವಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಮೊದಲ ಹಂತದಲ್ಲಿ ಶೇ.20ರಷ್ಟು ನ್ಯೂಕ್ಲಿಯರ್ ಇಂಧನ ಉತ್ಪಾದಿಸಿದ್ದು, ಅದನ್ನು ವಿಜ್ಞಾನಿಗಳಿಗೆ ಒದಗಿಸಲಾಗಿದೆ ಎಂದು ಹೇಳಿದರು. ಉತ್ಕೃಷ್ಟ ಗುಣಮಟ್ಟದ ಯೂರೇನಿಯಂನಿಂದ ಇಂಧನ ಉತ್ಪಾದಿಸುತ್ತಿರುವುದು ನ್ಯೂಕ್ಲಿಯರ್ ಪವರ್ ಪ್ಲ್ಯಾಂಟ್‌ಗಾಗಿ ಎಂದ ಅವರು, ಅದನ್ನು ಅಟೋಮಿಕ್ ಶಸ್ತ್ರಾಸ್ತ್ರ ತಯಾರಿಕೆಗೂ ಕೂಡ ಬಳಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಉತ್ಕೃಷ್ಟ ಗುಣಮಟ್ಟ ಹೊಂದಿರುವ ಯೂರೇನಿಯಂ ತಯಾರಿಕೆಗೆ ಉನ್ನತ ಮಟ್ಟದಲ್ಲಿ ಮಂಗಳವಾರ ಚಾಲನೆ ನೀಡಲಾಗಿತ್ತು ಎಂದು ಇರಾನ್ ತಿಳಿಸಿತ್ತು. ಏತನ್ಮಧ್ಯೆ ಯೂರೇನಿಯಂ ಅನ್ನು ಯಾವುದೇ ಕಾರಣಕ್ಕೂ ಉತ್ಪಾದಿಸಬಾರದು ಎಂದು ಅಂತಾರಾಷ್ಟ್ರೀಯ ಸಮುದಾಯ ಸಾಕಷ್ಟು ಬಾರಿ ಕಠಿಣ ಎಚ್ಚರಿಕೆಯನ್ನು ನೀಡಿತ್ತು. ಆದರೆ ಇರಾನ್ ಅದ್ಯಾವುದಕ್ಕೂ ಜಗ್ಗದೇ ಇದೀಗ ತಮ್ಮದು ನ್ಯೂಕ್ಲಿಯರ್ ದೇಶ ಎಂದು ಘಂಟಾಘೋಷವಾಗಿ ಸಾರುವ ಮೂಲಕ ವಿಶ್ವಸಂಸ್ಥೆ ಸೇರಿದಂತೆ ಶ್ರೀಮಂತ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ