ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುತ್ತು ಕೊಡಲೆಂದು ಬುರ್ಖಾ ಸರಿಸಿದಾಗ ಹೊರಬಿತ್ತು ಸತ್ಯ..! (Envoy | bearded bride | ends marriage | DUBAI)
Bookmark and Share Feedback Print
 
ವಧುವಿನ ಮುಖದ ಮೇಲೆ ಪುರುಷರಂತೆ ಗಡ್ಡವಿದೆ ಮತ್ತು ಆಕೆಯದ್ದು ಮೆಳ್ಳೆಗಣ್ಣು ಎಂಬ ಕಾರಣ ನೀಡಿರುವ ಅರಬ್ ವ್ಯಕ್ತಿಯೋರ್ವ ತನ್ನ ಮದುವೆಯನ್ನೇ ರದ್ದುಗೊಳಿಸಿದ ವಿಚಿತ್ರ ಪ್ರಕರಣ ಅರಬ್ ರಾಷ್ಟ್ರದಲ್ಲಿ ನಡೆದಿದೆ.

ಮದುವೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ (ನಿಶ್ಚಿತಾರ್ಥ) ಸರಸ ಸಲ್ಲಾಪ ನಡೆಸುತ್ತಾ ಬಂದಿದ್ದ ಅರಬ್ ರಾಯಭಾರಿಯೊಬ್ಬ ಮೊತ್ತ ಮೊದಲ ಬಾರಿಗೆ ತನ್ನ ವಧುವಿಗೆ ಮುತ್ತು ಕೊಡಲೆಂದು ಆಕೆಯ ಮುಖದ ಮೇಲಿದ್ದ ಪರದೆ ಸರಿಸಿದಾಗ ಇದು ಬಹಿರಂಗವಾಗಿದೆ.

ನಿಶ್ಚಿತಾರ್ಥದ ಬಳಿಕ ತನ್ನ ಭಾವೀ ಪತ್ನಿಯನ್ನು ರಾಯಭಾರಿ ಹಲವು ಸಾರಿ ಭೇಟಿ ಮಾಡಿದ್ದನಾದರೂ, ಈ ಸಂದರ್ಭದಲ್ಲೆಲ್ಲಾ ಆಕೆ ಬುರ್ಖಾ ಧರಿಸಿದ್ದಳು ಮತ್ತು ಮುಖವನ್ನೂ ಮುಚ್ಚಿಕೊಂಡಿದ್ದಳು.

ತನ್ನ ತಾಯಿಗೆ ವಧುವಿನ ತಂಗಿಯ ಭಾವಚಿತ್ರವನ್ನು ತೋರಿಸಲಾಗಿತ್ತು. ಆ ಬಳಿಕವೇ ನಿಖಾ ಮಾಡಿಕೊಳ್ಳಲಾಗಿತ್ತು. ಇದು ನನಗೆ ಆ ಸಂದರ್ಭದಲ್ಲಿ ತಿಳಿದಿರಲಿಲ್ಲ. ಮದುವೆ ನಿಶ್ಚಿತಾರ್ಥ ನಡೆದಿದ್ದ ಕಾರಣ ಪ್ರೀತಿಯಿಂದ ಚುಂಬಿಸಲು ಹೊರಟಿದ್ದೆ. ಆದರೆ ಆಕೆಯ ಮುಖದಲ್ಲಿ ಗಡ್ಡವಿರುವುದು ಮತ್ತು ಆಕೆಗೆ ಮೆಳ್ಳೆಗಣ್ಣಿರುವುದನ್ನು ಕಂಡು ಆಘಾತಗೊಳಗಾದೆ ಎಂದು ಮುರಿದು ಬಿದ್ದ ಮದುವೆಯ ವರ ವಿವರಣೆ ನೀಡಿದ್ದಾನೆ.

ಅರಬ್ ರಾಷ್ಟ್ರದ ಕಾನೂನಿನಂತೆ ಶರಿಯತ್ ನ್ಯಾಯಾಲಯದ ಮೊರೆ ಹೋಗಿರುವ ರಾಯಭಾರಿ ಮದುವೆಯನ್ನು ರದ್ದುಪಡಿಸಿಕೊಂಡಿದ್ದಾನೆ. ಆದರೆ ವಧುವಿಗೆ ನೀಡಿದ ಬಟ್ಟೆ-ಬರೆ ಮತ್ತು ಆಭರಣಗಳಿಗಾಗಿ ಮಾಡಿದ ಖರ್ಚು ಮತ್ತು ಪರಿಹಾರ ರೂಪವಾಗಿ ತನಗೆ 136,000 ಡಾಲರುಗಳನ್ನು ನೀಡಬೇಕೆಂಬ ಬೇಡಿಕೆಯನ್ನು ನ್ಯಾಯಾಲಯ ತಳ್ಳಿ ಹಾಕಿದೆ.

ವಿಚಾರಣೆ ಮುಕ್ತಾಯಗೊಳಿಸಿದ ನಂತರ ನ್ಯಾಯಾಲಯವು ವಧುವನ್ನು ವಿಶೇಷ ತಜ್ಞರ ಬಳಿ ಕಳುಹಿಸಿ, ದೇಹದಲ್ಲಾಗಿರುವ ಹಾರ್ಮೋನ್ ವೈಪರೀತ್ಯಗಳನ್ನು ಸರಿಪಡಿಸಿಕೊಳ್ಳುವ ಚಿಕಿತ್ಸೆಗಳನ್ನು ಪಡೆಯುವಂತೆ ಸೂಚಿಸಿದೆ. ಆದರೆ ತಜ್ಞರ ಪ್ರಕಾರ ಆಕೆ ಅಂತಹ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದು ವರದಿ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ