ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫೆ.18ಕ್ಕೆ ಲಾಮಾ-ಒಬಾಮ ಭೇಟಿ: ಚೀನಾ ಆಕ್ರೋಶ (White House | Obama | Dalai Lama | Tibet)
Bookmark and Share Feedback Print
 
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಟಿಬೆಟ್ ಧಾರ್ಮಿಕ ಮುಖಂಡ ದಲೈಲಾಮಾ ಅವರನ್ನು ಫೆ.18ರಂದು ಶ್ವೇತ ಭವನದಲ್ಲಿ ಭೇಟಿಯಾಗಲಿದ್ದಾರೆಂದು ತಿಳಿಸಿದ್ದು, ಅಮೆರಿಕದ ನಿಲುವಿಗೆ ಚೀನಾ ಆಕ್ರೋಶ ವ್ಯಕ್ತಪಡಿಸಿದೆ.

ದಲೈಲಾಮಾ ಅವರ ಭೇಟಿಗಾಗಿಯೇ ಒಬಾಮ ಅವರು ಎದುರು ನೋಡುತ್ತಿದ್ದು, ವಿವಾದದ ಕುರಿತಂತೆ ಸಕಾರಾತ್ಮಕ ಮಾತುಕತೆಯನ್ನೂ ಕೂಡ ಈ ಸಂದರ್ಭದಲ್ಲಿ ನಡೆಸಲಿದ್ದಾರೆ ಎಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ರೋಬೆರ್ಟ್ ಗಿಬ್ಸ್ ತಿಳಿಸಿದ್ದಾರೆ.

ಒಬಾಮ ಅವರು ದಲೈಲಾಮಾ ಅವರನ್ನು ಮ್ಯಾಪ್ ರೂಂನಲ್ಲಿ ಭೇಟಿಯಾಗಲಿದ್ದಾರೆ. ಆದರೆ ಓವಲ್ ಕಚೇರಿಯಲ್ಲಿ ಅವರನ್ನು ಭೇಟಿ ಮಾಡುವುದಿಲ್ಲ ಎಂದು ಗಿಬ್ಸ್ ಸ್ಪಷ್ಟಪಡಿಸಿದ್ದಾರೆ.

ದಲೈಲಾಮಾ ಮತ್ತು ಒಬಾಮ ಅವರ ಮೊದಲ ಭೇಟಿ ಇದಾಗಿದೆ ಎಂದು ತಿಳಿಸಿರುವ ಅವರು, ಫೆ.18ರಂದು ಲಾಮಾ ಅವರೊಂದಿಗೆ ಅಧಿಕೃತವಾಗಿ ಮಾತುಕತೆ ನಡೆಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ