ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಬಳಿಕ ಉಗ್ರರೂ ಕಾಶ್ಮೀರ ಮಾತುಕತೆ ಬೇಕು ಅಂತಿದ್ದಾರೆ! (Pak govt | terrorists | Kashmir | Hizb-ul-Mujahideen)
Bookmark and Share Feedback Print
 
ಕಾಶ್ಮೀರ ವಿವಾದವನ್ನು ಹೊರಗಿಟ್ಟಲ್ಲಿ ಭಾರತದ ಜತೆಗಿನ ಮಾತುಕತೆ ಪರಿಪೂರ್ಣವಾಗದು ಎಂದು ಪಾಕಿಸ್ತಾನ ಸರಕಾರ ರಾಗ ಎಳೆದ ನಂತರ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಕೂಡ ಅದನ್ನೇ ನುಡಿಸುತ್ತಿದೆ.

ಭಾರತ-ಪಾಕ್ ಮಾತುಕತೆಯಲ್ಲಿ ಕಾಶ್ಮೀರ ಇಲ್ಲದೇ ಇದ್ದರೆ ಅದೊಂದು ನಿಶ್ಪ್ರಯೋಜಕ ಮಾತುಕತೆ ಎಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅತಿ ದೊಡ್ಡ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಹೇಳಿದ್ದಾನೆ.

ಜಿಹಾದಿ ನಾಯಕತ್ವದ ಪರವಾಗಿ ಮಾತನಾಡುತ್ತಿದ್ದ ಸಲಾಹುದ್ದೀನ್, ಕಾಶ್ಮೀರದ ಕುರಿತು ಚರ್ಚೆ ನಡೆಯಬೇಕು ಮತ್ತು ಮಾತುಕತೆ ಕಾಶ್ಮೀರ ಕೇಂದ್ರಿತವಾಗಿರಬೇಕು. ಇದನ್ನೇ ಪ್ರಮುಖ ವಿಷಯವನ್ನಾಗಿ ಮಾಡಿಕೊಳ್ಳದೆ ನಡೆಸುವ ಮಾತುಕತೆಯಿಂದ ಯಾವುದೇ ಫಲಿತಾಂಶಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.

ನಾಲ್ಕು ವರ್ಷಗಳ ಕಾಲ ಮುಂದುವರಿದಿದ್ದ ಶಾಂತಿ ಪ್ರಕ್ರಿಯೆಯು 2008ರ ನವೆಂಬರ್ ತಿಂಗಳಲ್ಲಿನ ಮುಂಬೈ ಭಯೋತ್ಪಾದನಾ ದಾಳಿ ನಂತರ ಸ್ಥಗಿತಗೊಂಡಿತ್ತು. ಈ ದಾಳಿಯಲ್ಲಿ ಪಾಲ್ಗೊಂಡವರ ಮತ್ತು ಪಿತೂರಿ ನಡೆಸಿದ ಪಾಕಿಸ್ತಾನ ಮೂಲದವರ ವಿರುದ್ಧ ಕ್ರಮ ಕೈಗೊಳ್ಳದ ಹೊರತು ಮಾತುಕತೆಯಿಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು.

ಪಾಕಿಸ್ತಾನವು ಏಳು ಮಂದಿ ಶಂಕಿತರನ್ನು ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸಿದ ಹೊರತಾಗಿ ಮಹತ್ವದ ಕ್ರಮಗಳನ್ನು ಕೈಗೊಂಡಿರದ ಹೊರತಾಗಿಯೂ ಭಾರತವು ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೆ ಆಹ್ವಾನ ನೀಡಿತ್ತು.

ಭಾರತವು ಶಾಂತಿ ಮತ್ತು ಸುರಕ್ಷತೆಗೆ ಬೆದರಿಕೆಯೊಡ್ಡುವ ಭಯೋತ್ಪಾದನೆಯೇ ಮಾತುಕತೆಯ ಪ್ರಮುಖ ಅಂಶ ಎಂದು ಹೇಳಿತ್ತು. ಇದಕ್ಕೆ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಸರಕಾರ, ಕಾಶ್ಮೀರ ವಿಚಾರ ಸೇರಿದಂತೆ ಪ್ರಮುಖ ಎಂಟು ವಿಚಾರಗಳ ಚರ್ಚೆಯ ಹೊರತು ಮಾತುಕತೆ ಪರಿಪೂರ್ಣವೆನಿಸದು ಎಂದು ಹೇಳಿತ್ತು.

ದಟ್ಟವಾಗಿ ದಾಡಿ ಬಿಟ್ಟಿರುವ 61ರ ಹರೆಯ ಸಲಾಹುದ್ದೀನ್ ವಿವಾದಿತ ಕಾಶ್ಮೀರದ ಬಗ್ಗೆ ಕಳೆದ 21 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾನೆ. ಭಾರತದ ವಶದಲ್ಲಿರುವ ಕಾಶ್ಮೀರದ ಬಡಗಂ ನಿವಾಸಿಯಾಗಿರುವ ಆತ ರಾಜಕಾರಣಿಯಾಗಿ ವಿಫಲನಾದ ನಂತರ ಭಯೋತ್ಪಾದನೆಯ ಹಾದಿಯನ್ನು ಹಿಡಿದಿದ್ದ.

90ರ ದಶಕದಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿದ್ದ ಆತ, ತನ್ನ ಭಯೋತ್ಪಾದನಾ ಚಟುವಟಿಕೆಗಳಿಗಾಗಿ ಹಲವು ಬಾರಿ ಭಾರತಕ್ಕೆ ಬಂದು ಹೋಗಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ