ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕ್ಲಿಂಟನ್‌ಗೆ ಹೃದಯ ರಕ್ತನಾಳ ಶಸ್ತ್ರಚಿಕಿತ್ಸೆ; ಆರೋಗ್ಯ ಸ್ಥಿರ (Bill Clinton | heart operation | US president | New York)
Bookmark and Share Feedback Print
 
ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಅಮೆರಿಕಾ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅಪಧಮನಿ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ.

ಗುರುವಾರ ಎದೆನೋವು ಕಾಣಿಸಿಕೊಂಡ ಕಾರಣ ಮಾಜಿ ಅಧ್ಯಕ್ಷರನ್ನು ನ್ಯೂಯಾರ್ಕ್‌ನ ಕೊಲಂಬಿಯಾ ಕ್ಯಾಂಪಸ್‌ನಲ್ಲಿನ 'ನ್ಯೂಯಾರ್ಕ್ ಪ್ರಿಸ್ಬಿಟೇರಿಯನ್ ಹಾಸ್ಪಿಟಲ್'ಗೆ ದಾಖಲಿಸಲಾಗಿತ್ತು. ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶುಕ್ರವಾರವೇ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಅವರ ಸಲಹೆಗಾರರು ತಿಳಿಸಿದ್ದಾರೆ.

ಕ್ಲಿಂಟನ್ ಅವರ ಹೃದಯದಲ್ಲಿ ಬ್ಲಾಕ್ ಆಗಿದ್ದ ರಕ್ತನಾಳವೊಂದನ್ನು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ತೆರವುಗೊಳಿಸಿದ್ದಾರೆ. ಶೀಘ್ರದಲ್ಲೇ ಅವರು ತನ್ನ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಇಲ್ಲಿನ ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಇಂದು ಬಿಡುಗಡೆಯಾದಲ್ಲಿ ಸೋಮವಾರದಿಂದಲೇ ಅವರು ಸಕ್ರಿಯರಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

ಇದೇ ಆಸ್ಪತ್ರೆಯಲ್ಲಿ ಐದು ವರ್ಷಗಳ ಹಿಂದೆ ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದ ಕ್ಲಿಂಟನ್ ಗುರುವಾರ ತನಗೆ ಎದೆನೋವಾಗುತ್ತಿದೆ ಎಂದು ಆಸ್ಪತ್ರೆಗೆ ಮರಳಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದ ವೈದ್ಯರುಗಳು ಬ್ಲಾಕ್ ಆಗಿದ್ದ ರಕ್ತನಾಳವನ್ನು ಸರಿಪಡಿಸಿದ್ದಾರೆ.

ಕ್ಲಿಂಟನ್ ಬ್ಲಾಕ್ ಆಗಿದ್ದ ಬೈಪಾಸನ್ನು ತೆರೆಯುವ ಬದಲು ವೈದ್ಯರು ಅವರ ಬ್ಲಾಕ್ ಆಗಿದ್ದ ಮೂಲ ರಕ್ತನಾಳವನ್ನು ಮರು ತೆರೆದು ಎರಡು ಕೃತಕ ರಕ್ತನಾಳಗಳನ್ನು ಒಳ ಸೇರಿಸಿದರು. ಈ ಪ್ರಕ್ರಿಯೆ ಸುಮಾರು ಒಂದು ಗಂಟೆಯಷ್ಟು ಕಾಲಾವಕಾಶ ತೆಗೆದುಕೊಂಡಿತ್ತು. ಎರಡು ಗಂಟೆಗಳ ನಂತರ ಕ್ಲಿಂಟನ್ ಆರೋಗ್ಯ ಸುಸ್ಥಿಗೆ ಮರಳಿದೆ. ಈಗ ಅವರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮಾಜಿ ಅಧ್ಯಕ್ಷರಿಗೆ ಹೃದಯಾಘಾತವಾಗಿರುವ ಯಾವುದೇ ಸಾಧ್ಯತೆಗಳು ಗೋಚರಿಸಿಲ್ಲ. ಅವರ ಡಯಟ್‌ನಿಂದಾಗಿ ಹೃದಯದ ರಕ್ತನಾಳ ಈ ಬಾರಿ ಬ್ಲಾಕ್ ಆಗಿದ್ದಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ