ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮತ್ತೊಬ್ಬರೆದುರು ಬೆತ್ತಲೆಯಾಗುವುದು ನಿಷಿದ್ಧ: ಇಸ್ಲಾಂ ಫತ್ವಾ (Muslim-American body | fatwa | airport body scanners | Islamic scholars)
Bookmark and Share Feedback Print
 
ವಿಮಾನ ನಿಲ್ದಾಣಗಳಲ್ಲಿನ ಬಾಡಿ ಸ್ಕ್ಯಾನರ್‌ಗಳ ಮೂಲಕ ಮುಸ್ಲಿಮರು ತಪಾಸಣೆಗೊಳಗಾಗುವುದು ಸಲ್ಲದು; ಯಾರದೇ ದೇಹದ ಖಾಸಗಿ ಭಾಗಗಳನ್ನು ಮತ್ತೊಬ್ಬರು ನೋಡುವುದು ಇಸ್ಲಾಂ ಪ್ರಕಾರ ನಿಷಿದ್ಧ ಎಂದು ಹೇಳಿರುವ ಅಮೆರಿಕಾದ ಮುಸ್ಲಿಂ ಧಾರ್ಮಿಕ ಗುರುಗಳು ಫತ್ವಾ ಹೊರಡಿಸಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಸ್ಕ್ಯಾನರುಗಳ ಮೂಲಕ ಹೋಗುವುದು ಇಸ್ಲಾಮಿಕ್ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು 'ಉತ್ತರ ಅಮೆರಿಕಾ ಫಿಖ್ ಕೌನ್ಸಿಲ್' ಧಾರ್ಮಿಕ ಫತ್ವಾ ಹೊರಡಿಸಿದ್ದು, ಇದನ್ನು ಅಮೆರಿಕಾದ ಕೆಲವು ಮುಸ್ಲಿಂ ಸಂಘಟನೆಗಳು ಬೆಂಬಲಿಸಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಓರ್ವ ಪುರುಷ ಅಥವಾ ಮಹಿಳೆ ಮತ್ತೊಬ್ಬ ಪುರುಷ ಅಥವಾ ಮಹಿಳೆಯೆದುರು ನಗ್ನರಾಗುವುದು ಇಸ್ಲಾಮಿಕ್ ಬೋಧನೆಗಳ ಉಲ್ಲಂಘನೆ ಎಂದು ಮಂಗಳವಾರ ಬಿಡುಗಡೆ ಮಾಡಲಾಗಿರುವ ಫತ್ವಾದಲ್ಲಿ ತಿಳಿಸಲಾಗಿದೆ.

ಇಸ್ಲಾಮ್ ಸುಶೀಲತೆಗೆ ಗರಿಷ್ಠ ಮಹತ್ವ ಕೊಡುತ್ತದೆ ಮತ್ತು ಇದನ್ನು ನಂಬಿಕೆಯ ಭಾಗವಾಗಿ ಪರಿಗಣಿಸುತ್ತದೆ. ಪುರುಷ ಮತ್ತು ಮಹಿಳೆಯರು ತಮ್ಮ ಖಾಸಗಿ ಭಾಗಗಳನ್ನು ಮುಚ್ಚಿಕೊಳ್ಳಬೇಕೆಂದು ಪವಿತ್ರ ಕುರಾನ್ ಅದರ ಬೆಂಬಲಿಗರಿಗೆ ಆದೇಶ ನೀಡಿದೆ ಎಂದು ವಿವರಣೆ ನೀಡಲಾಗಿದೆ.

ಡೆಟ್ರಾಯಿಟ್‌ನಲ್ಲಿ ನೈಜೀರಿಯಾದ ಶಂಕಿತ ಮುಸ್ಲಿಮ್ ಕ್ರಿಸ್ಮಸ್ ದಿನದಂದು ಅಮೆರಿಕಾ ವಿಮಾನವನ್ನು ಸ್ಫೋಟಿಸಲು ಸಂಚು ರೂಪಿಸಿದ ನಂತರ ಅಮೆರಿಕಾ ವಿಮಾನ ನಿಲ್ದಾಣಗಳು ಬಾಡಿ ಸ್ಕ್ಯಾನರುಗಳನ್ನು ಖರೀದಿಸುವ ಪ್ರಕ್ರಿಯೆಗಳಿಗೆ ಮುಂದಾಗಿವೆ. ಈ ಬಾಡಿ ಸ್ಕ್ಯಾನರುಗಳ ಮುಖಾಂತರ ವ್ಯಕ್ತಿಯ ದೇಹದಲ್ಲಿ ಅಥವಾ ಸೂಟ್‌ಕೇಸ್‌ಗಳಲ್ಲಿ ಅಡಗಿಸಿಕೊಂಡ ಸ್ಫೋಟಕಗಳನ್ನು ಪತ್ತೆ ಹಚ್ಚಬಹುದಾಗಿದೆ.

ಸ್ಕ್ಯಾನರುಗಳು ಮಾನವನ ಬೆತ್ತಲೆ ರೇಖಾಚಿತ್ರವನ್ನಷ್ಟೇ ನೀಡುತ್ತದೆಯಾದರೂ ಇದನ್ನು ಮುಸ್ಲಿಂ ಸಂಘಟನೆಗಳು ವಿರೋಧಿಸಿವೆ. ಇದು ತಮ್ಮ ಧರ್ಮಕ್ಕೆ ವಿರುದ್ಧವಾದುದು ಎಂದು ಹೇಳಿವೆ.

ಸ್ಕ್ಯಾನರ್‌ಗೊಳಪಡಲು ಬಯಸದವರಿಗೆ ವಿಮಾನ ನಿಲ್ದಾಣಗಳ ಅಧಿಕಾರಿಗಳು ತಪಾಸಣೆಯ ಆಯ್ಕೆಯನ್ನು ನೀಡುತ್ತಾರೆ. ಇಲ್ಲಿ ಭದ್ರತಾ ಅಧಿಕಾರಿಗಳು ದೇಹದ ಭಾಗಗಳನ್ನು ಮುಟ್ಟಿ ತಪಾಸಣೆ ನಡೆಸುತ್ತಾರೆ. ಇದನ್ನೇ ಆಯ್ಕೆ ಮಾಡಿಕೊಳ್ಳುವಂತೆ ಇದೀಗ ಮುಸ್ಲಿಂ ಸಂಘಟನೆಗಳು ಇಸ್ಲಾಂ ಧರ್ಮ ಪಾಲಿಸುವವರಿಗೆ ಕರೆ ನೀಡಿದೆ.

ಪ್ರಸಕ್ತ ಅಮೆರಿಕಾದ 19 ವಿಮಾನ ನಿಲ್ದಾಣಗಳಲ್ಲಿ 40 ಪೂರ್ಣ ಪ್ರಮಾಣದ ಬಾಡಿ ಸ್ಕ್ಯಾನರುಗಳನ್ನು ಅಳವಡಿಸಲಾಗಿದೆ. ಇನ್ನೂ 450 ಬಾಡಿ ಸ್ಕ್ಯಾನರುಗಳನ್ನು ಅಮೆರಿಕಾ ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗುತ್ತದೆ ಎಂದು ಸರಕಾರ ಹೇಳಿಕೊಂಡಿದೆ.

ತಪಾಸಣಾ ವಿಧಾನದಲ್ಲಿ ಸ್ವಲಿಂಗಿ ಅಧಿಕಾರಿಗಳು ಖಾಸಗಿ ಜಾಗದಲ್ಲಿ ವ್ಯಕ್ತಿಯನ್ನು ತಪಾಸಣೆ ಮಾಡುತ್ತಾರೆ. ಬಾಡಿ ಸ್ಕ್ಯಾನರುಗಳೆಂದರೆ ಬೆತ್ತಲೆ ಚಿತ್ರಗಳನ್ನು ನೀಡುತ್ತವೆ ಎಂಬ ಕಲ್ಪನೆಯಿದೆ. ಆದರೆ ಇದು ತಪ್ಪು, ಇಲ್ಲಿ ಕೇವಲ ರೇಖಾಚಿತ್ರಗಳಷ್ಟೇ ಮೂಡಿ ಬರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ