ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶೂಟೌಟ್: ಭಾರತೀಯ ಮೂಲದ ಪ್ರೊಫೆಸರ್ ಸೇರಿ 3ಬಲಿ (US shooting | Indian | University of Alabama | Police)
Bookmark and Share Feedback Print
 
ಅಧ್ಯಾಪಕ ವರ್ಗದವರ ಸಭೆ ನಡೆಯುತ್ತಿದ್ದ ವೇಳೆ ಮಹಿಳಾ ಪ್ರೊಫೆಸರೊಬ್ಬರು ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಮೂಲದ ಅಮೆರಿಕದ ಪ್ರೊಫೆಸರ್ ಸೇರಿದಂತೆ ಮೂರು ಮಂದಿ ಬಲಿಯಾಗಿರುವ ಘಟನೆ ಇಲ್ಲಿನ ದಕ್ಷಿಣ ನಗರದ ಹುನ್‌ಟ್ಸ್‌ವಿಲ್ಲೆ ಅಲಾಬಾಮಾ ಯೂನಿವರ್ಸಿಟಿಯಲ್ಲಿ ನಡೆದಿದೆ.

ಘಟನೆ ಕುರಿತಂತೆ ಹುನ್‌ಟ್ಸ್‌ವಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಹೆನ್ರಿ ರೆಯ್ಸ್ ವಿವರಣೆ ನೀಡಿದ್ದು, ಗುಂಡಿನ ದಾಳಿಯಲ್ಲಿ ಮೃತಪಟ್ಟವರನ್ನು ಜೀವಶಾಸ್ತ್ರ ವಿಭಾಗದ ಭಾರತೀಯ ಮೂಲದ ಅಧ್ಯಕ್ಷ ಪ್ರೊ.ಗೋಪಿ ಪೋಡಿಲ್ಲಾ ಎಂದು ಗುರುತಿಸಲಾಗಿದೆ. ಮತ್ತಿಬ್ಬರು ಜೀವಶಾಸ್ತ್ರ ವಿಭಾಗದ ಪ್ರೊ.ಮರಿಯಾ ಡೇವಿಸ್ ಮತ್ತು ಪ್ರೊ.ಅಡ್ರಿಯೆಲ್ ಜಾನ್ಸ್‌ನ್ ಎಂದು ತಿಳಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ಮೂರು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿರುವುದಾಗಿ ಸ್ಥಳೀಯ ಮಾಧ್ಯಮವೊಂದರ ವರದಿ ತಿಳಿಸಿದ್ದು, ಇಬ್ಬರು ಬೋಧನಾವರ್ಗದ ಸದಸ್ಯರಾಗಿದ್ದಾರೆ. ಮತ್ತೊಬ್ಬರು ಸ್ಟಾಪ್ ಸದಸ್ಯರಾಗಿರುವುದಾಗಿ ಹೇಳಿದೆ.

ಶೂಟೌಟ್‌ ನಡೆಸಿದ ಮಹಿಳಾ ಪ್ರೊಫೆಸರ್ ಅನ್ನು ವಶಕ್ಕೆ ತೆಗೆದುಕೊಂಡಿದ್ದು, ಎರಡನೇ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದಿರುವ ರೆಯ್ಸ್, ಆ ವ್ಯಕ್ತಿಯನ್ನು ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಗುಂಡಿನ ದಾಳಿ ನಡೆಸಲು ನಿಖರವಾದ ಕಾರಣ ಏನು ಎಂದು ತಿಳಿದು ಬಂದಿಲ್ಲ, ವಿಚಾರಣೆಯ ನಂತರವಷ್ಟೇ ವಿವರ ತಿಳಿಯಬೇಕಾಗಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ