ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಢಾಕಾ ಹಿಂಸಾಚಾರ: ಜಮಾತ್ ಇಸ್ಲಾಮಿ ಮುಖಂಡರ ಸೆರೆ (Jamaat-e-Islami | Bangladesh | Chhatra Shibir | Rajshahi University)
Bookmark and Share Feedback Print
 
ಇಲ್ಲಿನ ರಾಜ್‌ಷಾಯಿ ಯೂನಿರ್ವಸಿಟಿ ಕ್ಯಾಂಪಸ್‌ನಲ್ಲಿ ಕಳೆದ ಸೋಮವಾರ ಹಿಂಸಾಚಾರ ಸಂಭವಿಸಿದ್ದು, ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದ. ಇದೀಗ ಘಟನೆ ಸಂಬಂಧಿಸಿದಂತೆ ಘರ್ಷಣೆ ಮುಂದುವರಿದಿರುವ ಪರಿಣಾಮ ಜಮಾತ್ ಇ ಇಸ್ಲಾಮಿ, ಇಸ್ಲಾಮಿ ಛಾತ್ರಾ ಶಿಬಿರ್ ಯೂತ್ ಸಂಘಟನೆಯ 200ಮುಖಂಡರನ್ನು ಬಂಧಿಸಿರುವುದಾಗಿ ಬಾಂಗ್ಲಾ ತಿಳಿಸಿದೆ.

ಸೋಮವಾರ ಶಿಬಿರ್ ಕಾರ್ಯಕರ್ತರು ಮತ್ತು ಬಾಂಗ್ಲಾದೇಶ್ ಛಾತ್ರಾ ಲೀಗ್ ನಡುವೆ ನಡೆದ ಹಿಂಸಾಚಾರದಿಂದಾಗಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಘಟನೆಯಲ್ಲಿ ಛಾತ್ರಾ ಲೀಗ್ ಮುಖಂಡ ಶುಕ್ರವಾರ ಬಲಿಯಾದ ಘಟನೆ ನಡೆದಿತ್ತು.ಆ ನಿಟ್ಟಿನಲ್ಲಿ ಛಾತ್ರಾ ಶಿಬಿರ್ ಅನ್ನು ನಿಷೇಧಿಸಬೇಕೆಂದು ಅವಾಮಿ ಲೀಗ್ ಕಾನೂನು ಸಚಿವರು ಒತ್ತಡ ಹೇರಿದ್ದಾರೆ.

2001ರಲ್ಲಿ ಛಾತ್ರಾ ಲೀಗ್ ಸ್ಟೂಡೆಂಟ್ಸ್ ಸಂಘಟನೆ ಕಾಲೇಜ್ ಕ್ಯಾಂಪಸ್‌ನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿತ್ತು. ಆದರೆ ತದನಂತರ ಛಾತ್ರಾ ಶಿಬಿರ್ ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಇದರಿಂದಾಗಿ ಎರಡೂ ಸಂಘಟನೆಗಳ ನಡುವೆ ಘರ್ಷಣೆಗೆ ಕಾರಣವಾಗಿತ್ತು.

ಘರ್ಷಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಬಾಂಗ್ಲಾದೇಶ್ ಜಮಾತ್ ಇ ಇಸ್ಲಾಮಿ ಮತ್ತು ಅದರ ಸ್ಟೂಡೆಂಟ್ಸ್ ಇಸ್ಲಾಮಿ ಛಾತ್ರಾ ಶಿಬಿರ್‌ನ ಸುಮಾರು 195ಕಾರ್ಯಕರ್ತರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ