ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಲ್ಲಾ ವಿವಾದದ ಬಗ್ಗೆ ಧ್ವನಿ ಎತ್ತುವೆವು-ಷರತ್ತು ಹಾಕ್ಬೇಡಿ:ಭಾರತಕ್ಕೆ ಪಾಕ್ (Pakistan | India | Kashmir | Abdul Basit | Balochistan)
Bookmark and Share Feedback Print
 
ಭಾರತ ಮತ್ತು ಪಾಕ್ ನಡುವೆ ಫೆಬ್ರುವರಿ 25ರಂದು ನಡೆಯಲಿರುವ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯಲ್ಲಿ ಯಾವ ವಿವಾದದ ಕುರಿತಾಗಿಯೂ ಪಾಕ್ ಮುಕ್ತವಾಗಿ ಧ್ವನಿ ಎತ್ತಲಿದೆ ಎಂದು ತಿಳಿಸಿದೆ.

ಭಾರತ-ಪಾಕ್ ನಡುವೆ ಪುನರಾರಂಭಗೊಂಡಿರುವ ಮಾತುಕತೆಯಲ್ಲಿ ಭಾರತ ಮುಂಚಿತವಾಗಿ ಯಾವುದೇ ಷರತ್ತನ್ನು ಹೇರಬಾರದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಬಾಸಿಟ್ ಪಿಟಿವಿಗೆ ಹೇಳಿದ್ದಾರೆ.

ಕಾಶ್ಮೀರ, ನದಿ ನೀರು ಹಂಚಿಕೆ ವಿವಾದ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಪಾಕಿಸ್ತಾನ ಮುಕ್ತವಾಗಿ ಧ್ವನಿ ಎತ್ತಲಿದೆ ಎಂದು ಸ್ಪಷ್ಟಪಡಿಸಿರುವ ಅಬ್ದುಲ್, ಕಾಶ್ಮೀರ ಸಮಸ್ಯೆ ಕುರಿತಂತೆ ಭಾರತ ಅವಿಧೇಯತೆಯಿಂದ ನಡೆದುಕೊಳ್ಳುತ್ತಿರುವುದಾಗಿ ಈ ಸಂದರ್ಭದಲ್ಲಿ ಆರೋಪಿಸಿದರು.

ಕಾಶ್ಮೀರ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಭಾರತ ಯಾವುದೇ ಸೂಕ್ತವಾದ ಕ್ರಮವನ್ನು ಕೈಗೊಂಡಿಲ್ಲ. ಈ ಬಗ್ಗೆ 2008ರ ಮುಂಬೈ ದಾಳಿಯ ನಂತರ ಭಾರತ ಷರತ್ತುಬದ್ಧ ಮಾತುಕತೆಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಕಾಶ್ಮೀರಿಗಳ ಸ್ವಹಿತಾಸಕ್ತಿಗೆ ಮನ್ನಣೆ ನೀಡಬೇಕು ಮತ್ತು ಅವರು ಶಾಂತಿಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕೆಂದು ಅಬ್ದುಲ್ ತಿಳಿಸಿದ್ದಾರೆ. ಅದೇ ರೀತಿ ಅಫ್ಘಾನಿಸ್ತಾನದಲ್ಲಿ ಭಾರತದ ರಹಸ್ಯ ಚಟುವಟಿಕೆಯನ್ನೂ ಕೂಡ ಪಾಕಿಸ್ತಾನ ಗಂಭೀರವಾಗಿ ಪರಿಗಣಿಸಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ