ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತಕ್ಕೆ ಹೊರಗುತ್ತಿಗೆ; ಕಂಪನಿಗಳ ಮೇಲೆ ಒಬಾಮಾ ಕಿಡಿ (outsourcing to India | US companies | Barack Obama | United States)
Bookmark and Share Feedback Print
 
ಭಾರತಕ್ಕೆ ಹೊರಗುತ್ತಿಗೆ ನೀಡುತ್ತಿರುವ ಅಮೆರಿಕಾ ಕಂಪನಿಗಳ ವಿರುದ್ಧ ಮತ್ತೆ ಕಿಡಿ ಕಾರಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ, ರಾಷ್ಟ್ರದಲ್ಲಿನ ತೆರಿಗೆ ತಪ್ಪಿಸಿಕೊಳ್ಳುವ ಸಲುವಾಗಿ ಬೆಂಗಳೂರಿನಂತಹ ನಗರಗಳಲ್ಲಿ ಕಾರ್ಯನಿರ್ವಹಿಸಿ ವಂಚಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣವಾಗಿ ಅಮೆರಿಕಾದಲ್ಲೇ ಉದ್ಯಮ ನಡೆಸುವುದಾದರೆ, ಇಲ್ಲೇ ಹೂಡಿಕೆ ಮಾಡುವುದಾದರೆ, ಇಲ್ಲಿನ ಜನರನ್ನೇ ಉದ್ಯೋಗಕ್ಕಾಗಿ ಆರಿಸಿಕೊಂಡರೆ ಶೇ.35ರಷ್ಟು ತೆರಿಗೆ ನೀಡಬೇಕಾಗುತ್ತದೆ ಎಂದು ಬ್ಲೂಮ್‌ಬರ್ಗ್ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಮಾತು ಮುಂದುವರಿಸಿದ ಅವರು, ನಿಮ್ಮದು ಅಂತಾರಾಷ್ಟ್ರೀಯ ಕಂಪನಿಯಾಗಿದ್ದರೆ ಭಾರತದಲ್ಲಿ ಹೂಡಿಕೆ ಮಾಡುತ್ತೀರಿ. ನೀವು ಕೆಲಸಕ್ಕೆ ನೌಕರರನ್ನು ತೆಗೆದುಕೊಳ್ಳುವುದು ಭಾರತದಲ್ಲಿ. ನಿಮ್ಮ ಕಚೇರಿಗಳು ಮತ್ತು ಪರಿಕರಗಳು ಇರುವುದು ಭಾರತದಲ್ಲಿ. ಆದರೆ ಪ್ರಧಾನ ಕಚೇರಿ ಮಾತ್ರ ಅಮೆರಿಕಾದಲ್ಲಿರುತ್ತದೆ. ಭಾರತದಲ್ಲಿ ಲಭ್ಯವಾಗುವ ಎಲ್ಲಾ ರಿಯಾಯಿತಿಗಳನ್ನೂ ನೀವು ಪಡೆದುಕೊಳ್ಳುತ್ತೀರಿ. ಆದರೆ ನಿಮ್ಮ ಆದಾಯವನ್ನು ಅಮೆರಿಕಾದ ಹೊರಗೇ ಉಳಿಸಿಕೊಳ್ಳುತ್ತೀರಿ. ಇದು ಸರಿಯೆಂದು ನಿಮಗೆ ಅನ್ನಿಸುತ್ತಿದೆಯೇ ಎಂದು ಅಮೆರಿಕಾ ಕಂಪನಿಗಳಿಗೆ ಒಬಾಮಾ ಪ್ರಶ್ನೆ ಎಸೆದಿದ್ದಾರೆ.

ನಿಮ್ಮ ಕಂಪನಿಗಳ ಉತ್ಪನ್ನಗಳ ಮಾರಾಟ ಶೇ.90ರಷ್ಟು ಅಮೆರಿಕಾದಲ್ಲೇ ನಡೆಯುತ್ತವೆ. ಆದರೆ ಶೇ.90ರಷ್ಟು ಅದರ ಆದಾಯವನ್ನು ನೀವು ವಿದೇಶಗಳಿಗೆ ಹಂಚುತ್ತೀರಿ. ಇಲ್ಲಿನ ಅಕೌಂಟೆಂಟುಗಳಿಗೆ ಬಿಡುವಿಲ್ಲ ಎಂದು ನೀವು ಭಾವಿಸಿದ್ದೀರಾ ಎಂದಿರುವ ಅವರು, ಪ್ರಸಕ್ತ ದೇಶದಲ್ಲಿರುವ ಕಂಪನಿಗಳ ಕಾನೂನುಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು ವಿದೇಶಗಳಲ್ಲಿ ಕಂಪನಿಗಳು ವ್ಯವಹಾರ ನಡೆಸುತ್ತಿವೆ ಎಂದರು.

ಅಮೆರಿಕಾದ ಕಂಪನಿಗಳು ತಮ್ಮೆಲ್ಲಾ ಕಚೇರಿಗಳನ್ನು ಇಲ್ಲೇ ತೆರೆಯಬೇಕು ಮತ್ತು ಅಮೆರಿಕಾ ಪ್ರಜೆಗಳಿಗೇ ಉದ್ಯೋಗ ನೀಡಬೇಕು. ಇಲ್ಲೇ ನೀವು ಹೂಡಿಕೆ ಮಾಡಬೇಕು. ಭಾರತ ಸೇರಿದಂತೆ ಕಡಿಮೆ ತೆರಿಗೆ ವಿಧಿಸುವ ದೇಶಗಳಲ್ಲಿ ಲಾಭ ಮಾಡಿಕೊಳ್ಳುವುದರ ಬದಲು ದೇಶದ ಆರ್ಥಿಕತೆಗೆ ನೀವು ಪೂರಕವಾಗಿ ನಿಂತು ಇಲ್ಲೇ ನಿಮ್ಮೆಲ್ಲಾ ಚಟುವಟಿಕೆಗಳನ್ನು ನಡೆಸಬೇಕು ಎಂದು ಒಬಾಮಾ ಕಂಪನಿಗಳಿಗೆ ಸಲಹೆ ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ