ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಸರ್ಕಾರಿ ಶಾಲೆಯನ್ನೇ ಸ್ಫೋಟಿಸಿದ ಉಗ್ರರು (Pakistan | bomb school | Tribal area | militants | Afghanistan)
Bookmark and Share Feedback Print
 
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ್ ಗಡಿಪ್ರದೇಶದ ಬುಡಕಟ್ಟು ಪ್ರದೇಶದಲ್ಲಿನ ಸರ್ಕಾರಿ ಬಾಲಕರ ಶಾಲೆಯೊಂದರ ಮೇಲೆ ತಾಲಿಬಾನ್ ಬೆಂಬಲಿತ ಉಗ್ರರು ಶನಿವಾರ ಬಾಂಬ್ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖ್ವಾರ್ಮದಿನ್ ಗ್ರಾಮದಲ್ಲಿನ ಮೊಹಮ್ಮದ್ ಬುಡಕಟ್ಟು ಪ್ರದೇಶದಲ್ಲಿ ಸಮೀಪ ಇರುವ ಶಾಲೆ ಸಮೀಪದ ಐದು ಸ್ಥಳಗಳಲ್ಲಿ ಬಾಂಬ್ ಅಡಗಿಸಿಟ್ಟಿದ್ದು, ಅದು ಏಕಕಾಲದಲ್ಲಿ ಸ್ಫೋಟಗೊಂಡ ಪರಿಣಾಮ ಶಾಲಾ ಕಟ್ಟಡ ಸಂಪೂರ್ಣವಾಗಿ ಧ್ವಂಸಗೊಂಡಿದೆ.

ಶಾಲೆಯಲ್ಲಿ 28 ಕೋಣೆಗಳಿದ್ದು, ಅದರಲ್ಲಿ ಹೆಚ್ಚಿನ ಕೋಣೆಗಳು ಧ್ವಂಸಗೊಂಡಿವೆ. ಶಾಲೆ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಇಲ್ಲದಿದ್ದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಥಳೀಯಾಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಡಕಟ್ಟು ಪ್ರದೇಶ ಮತ್ತು ನಾರ್ತ್ ವೆಸ್ಟ್ ಫ್ರಂಟಿಯರ್ ಪ್ರೊವಿನ್ಸ್ ಪ್ರದೇಶದಲ್ಲಿನ ಉಗ್ರರನ್ನು ಮಟ್ಟ ಹಾಕಲು ಪಾಕಿಸ್ತಾನ್ ಮಿಲಿಟರಿ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಪಾಕ್ ಮಿಲಿಟರಿ ವಿರುದ್ಧ ಕಿಡಿಕಾರುತ್ತಿರುವ ಉಗ್ರರು ಈ ಪ್ರದೇಶಗಳಲ್ಲಿ ಭೀಕರ ಸ್ಫೋಟ ಕೃತ್ಯ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ