ನ್ಯೂಯಾರ್ಕ್ , ಭಾನುವಾರ, 14 ಫೆಬ್ರವರಿ 2010( 13:47 IST )
ಮೈನ್ಮಾರ್‌ನ ಜನಪ್ರಿಯ ನಾಯಕಿ ಆಂಡ್ ಸ್ಯಾನ್ ಸೂಕಿಯವರನ್ನು ಬಿಡುಗಡೆ ಮಾಡಲು ನಿರ್ಧರಿಸಿರುವ ಸರಕಾರಕ್ಕೆ,ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಸ್ವಾಗತಿಸಿದ್ದಾರೆ.
ಸುಮಾರು ಆರು ವರ್ಷಗಳಿಂದ ಗೃಹಬಂಧನದಲ್ಲಿರುವ ಸೂಕಿ,ಶಿಕ್ಷೆಯ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಮನವಿ ಮಾಡಲು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರೆಸಿ ಪಕ್ಷದ ಉಪಾಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸೂಕಿಯವರ ಬಿಡುಗಡೆಯಿಂದಾಗಿ ಎನ್‌ಎಲ್‌ಡಿ ಪಕ್ಷದ ನಾಯಕರು ಹಾಗೂ ಮೈನ್ಮಾರ್ ಸರಕಾರ ಪರಸ್ಪರ ಮುಕ್ತತೆಯಿಂದ ಮಾತುಕತೆ ನಡೆಸಲು ಸಾಧ್ಯವಾಗುತ್ತದೆ ಎಂದು ಬಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.