ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾ:ಸ್ಫೋಟ ಸಂಚು-5 ಮುಸ್ಲಿಮ್ ಉಗ್ರರಿಗೆ ಜೈಲು ಶಿಕ್ಷೆ (Muslims | Australia jihad plot | Al Qaeda | jihad)
Bookmark and Share Feedback Print
 
ಜಿಹಾದ್ ಹೆಸರಿನಲ್ಲಿ ಭಯೋತ್ಪಾದನೆ ಸಂಚು ರೂಪಿಸಿರುವ ಆರೋಪ ಎದುರಿಸುತ್ತಿರುವ ಐದು ಮಂದಿ ಮುಸ್ಲಿಮರಿಗೆ ಆಸ್ಟ್ರೇಲಿಯಾ ನ್ಯಾಯಾಲಯ ಸೋಮವಾರ ಜೈಲು ಶಿಕ್ಷೆ ವಿಧಿಸಿದೆ.

2004 ಮತ್ತು 2005ರಲ್ಲಿ ಭಯೋತ್ಪಾದನಾ ದಾಳಿ ನಡೆಸುವ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲೀಯಾದ ಐದು ಮಂದಿ ಮುಸ್ಲಿಮರಿಗೆ ಸುಪ್ರೀಂಕೋರ್ಟ್ 2009ರ ಅಕ್ಟೋಬರ್‌ನಲ್ಲಿ ದೋಷಿ ಎಂದು ತೀರ್ಪು ನೀಡಿತ್ತು.

ಅಲ್ ಖಾಯಿದಾದ ನಿರ್ದೇಶನದಂತೆ ಬಾಂಬ್ ತಯಾರಿಸಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂದು ಸರ್ಕಾರಿ ಪರ ವಕೀಲರು ಸುಪ್ರೀಂಕೋರ್ಟ್‌‌ನಲ್ಲಿ ವಾದ ಮಂಡಿಸಿದ್ದರು. ಸುಮಾರು ಹತ್ತು ತಿಂಗಳ ಕಾಲ ವಿಚಾರಣೆ ನಡೆದಿತ್ತು. ಆದರೆ ಆರೋಪಿತರು ಸ್ಫೋಟ ನಡೆಸಲು ಯಾವುದನ್ನು ಮುಖ್ಯ ಗುರಿಯಾಗಿರಿಸಿಕೊಂಡಿದ್ದರು ಎಂಬುದನ್ನು ಸ್ಪಷ್ಟಪಡಿಸಿಲ್ಲವಾಗಿತ್ತು.

ಆರೋಪಿತರೆಲ್ಲಾ 25ರಿಂದ 44ರ ಹರೆಯದವರಾಗಿದ್ದಾರೆ. ವಿಚಾರಣೆ ನಂತರ ನ್ಯಾಯಾಧೀಶರು ನೀಡಿದ ತೀರ್ಪಿನಲ್ಲಿ ಯಾವ ಆರೋಪಿಯ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ