ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದಲ್ಲಿ ಎಚ್ಚರಿಕೆಯಿರಲಿ: ಅಮೆರಿಕಾ, ಇಂಗ್ಲೆಂಡ್, ಆಸೀಸ್ ಸಲಹೆ (USA | UK | Australia | Pune blast)
Bookmark and Share Feedback Print
 
ವಿದೇಶಿ ಪ್ರಜೆಗಳು ಸ್ವಾದಿಷ್ಟ ಭಕ್ಷ್ಯಗಳಿಗಾಗಿ ಮುಗಿ ಬೀಳುವ ಪುಣೆಯ ಮೇಲೆ ಬಾಂಬ್ ದಾಳಿ ನಡೆದಿರುವ ಬೆನ್ನಿಗೆ ಅಮೆರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಗಳು ತಮ್ಮ ಪ್ರಜೆಗಳಿಗೆ ಭಾರತ ಪ್ರಯಾಣ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವಂತೆ ಸಲಹೆ ಮಾಡಿದೆ.

ಭಾರತದಲ್ಲಿ ಭಯೋತ್ಪಾದನಾ ದಾಳಿಗಳು ಮುಂದುವರಿಯುವ ಸಾಧ್ಯತೆಗಳಿರುವುದರಿಂದ ಅಮೆರಿಕಾ ಪ್ರಜೆಗಳು ಎಚ್ಚರಿಕೆಯಿಂದಿರುವಂತೆ ಸಲಹೆ ಮಾಡಲಾಗಿದೆ.

ವಿದೇಶೀಯರು ಸತತ ಭೇಟಿ ನೀಡುವ ಮಹಾರಾಷ್ಟ್ರದ ಪುಣೆಯಲ್ಲಿನ ಬೇಕರಿ ಮೇಲೆ ಫೆಬ್ರವರಿ 13ರಂದು ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಹಾಗಾಗಿ ಇನ್ನೂ ಅವರ ಗುಂಪು ಮತ್ತಷ್ಟು ದಾಳಿಗಳನ್ನು ನಡೆಸಲು ಸಮರ್ಥವಾಗಿದೆ. ಅಮೆರಿಕಾ ಅಥವಾ ವಿದೇಶೀಯರ ಮೇಲೆ ಅವರು ಭೇಟಿ ನೀಡುವ ಪ್ರದೇಶಗಳನ್ನು ಗುರುತಿಸಿ ದಾಳಿಗಳು ನಡೆಯುವ ಸಾಧ್ಯತೆಗಳಿವುರುವುದರಿಂದ ಎಚ್ಚರಿಕೆ ವಹಿಸಬೇಕು ಎಂದು ಅಮೆರಿಕಾ ತನ್ನ ಪ್ರಜೆಗಳಿಗೆ ನೀಡಿರುವ ಸಲಹೆಯಲ್ಲಿ ತಿಳಿಸಿದೆ.

ಪುಣೆಯಲ್ಲಿನ ಬೇಕರಿ-ಕಾಫಿ ಶಾಪ್ ಮೇಲೆ ಫೆಬ್ರವರಿ 13ರಂದು ನಡೆದ ಬಾಂಬ್ ದಾಳಿಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, 53 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ವಿದೇಶೀಯರೂ ಸೇರಿದ್ದಾರೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬ್ರಿಟೀಷ್ ಪ್ರಜೆಗಳು ಎಚ್ಚರಿಕೆ ವಹಿಸಬೇಕು ಎಂದು ಇಂಗ್ಲೆಂಡ್ ಸರಕಾರದ ವಿದೇಶ ಮತ್ತು ಕಾಮನ್‌ವೆಲ್ತ್ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಾದ್ಯಂತ ಭಾರೀ ಭಯೋತ್ಪಾದನಾ ದಾಳಿಗಳ ಸಾಧ್ಯತೆಗಳಿವೆ. ವಿದೇಶೀಯರು ಮತ್ತು ವಿದೇಶೀ ಉದ್ಯೋಗಿಗಳ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ದುಷ್ಕೃತ್ಯಗಳನ್ನು ನಡೆಸಲಾಗುತ್ತಿದೆ. ಹಾಗಾಗಿ ಎಚ್ಚರಿಕೆ ವಹಿಸತಕ್ಕದ್ದು ಎಂದು ಇಂಗ್ಲೆಂಡ್ ಹೇಳಿದೆ.

ಭಯೋತ್ಪಾದಕ ಗುಂಪುಗಳಿಂದ ಗರಿಷ್ಠ ಮಟ್ಟದ ದಾಳಿಗಳ ಬೆದರಿಕೆಯಿರುವುದರಿಂದ ಪ್ರಸಕ್ತ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ಪ್ರಜೆಗಳು ಗರಿಷ್ಠ ಎಚ್ಚರಿಕೆ ವಹಿಸಬೇಕು. ಮುಂಬೈ ಮತ್ತು ನವದೆಹಲಿಗಳಲ್ಲಿನ ಖ್ಯಾತ ಉದ್ಯಮ ಮತ್ತು ಪ್ರವಾಸಿ ತಾಣಗಳ ಮೇಲೆ ಸಂಭಾವ್ಯ ದಾಳಿಗಳ ಕುರಿತು ಮಾಹಿತಿಗಳನ್ನು ಸ್ವೀಕರಿಸುವುದನ್ನು ನಾವು ಮುಂದುವರಿಸುತ್ತಿದ್ದೇವೆ ಎಂದು ಆಸ್ಟ್ರೇಲಿಯಾ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ