ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳ ಹಿಂದೂ ರಾಷ್ಟ್ರ ಎಂದು ಘೋಷಿಸಿ: ಪ್ರತಿಭಟನೆ (Hindu state | Nepal | Kathmandu | Bhishma Ekta Parishad,)
Bookmark and Share Feedback Print
 
ನೇಪಾಳವನ್ನು ಜಾತ್ಯತೀತ ಗಣತಂತ್ರವಾಗಿದ್ದು, ಮತ್ತೆ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕೆಂದು ಒತ್ತಾಯಿಸಿ ಇಲ್ಲಿನ ಪೂರ್ವಭಾಗದ ಏಳು ನೇಪಾಳಿ ಜಿಲ್ಲೆಗಳಲ್ಲಿ ಹಿಂದೂ ಸಂಘಟನೆಯೊಂದು ಸಾರ್ವತ್ರಿಕ ಬಂದ್‌ಗೆ ಸೋಮವಾರ ಕರೆ ನೀಡಿದ್ದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಹಿಂದೂಪರ ಸಂಘಟನೆಯಾದ ಭೀಷ್ಮ ಏಕ್ತಾ ಪರಿಷತ್ ನೇಪಾಳವನ್ನು ಮತ್ತೆ ಹಿಂದೂ ರಾಷ್ಟ್ರ ಎಂದು ಘೋಷಿಸಿಲು ಒತ್ತಾಯಿಸಿ ಬಂದ್‌ಗೆ ಕರೆ ನೀಡಿತ್ತು. ಈ ಸಂದರ್ಭದಲ್ಲಿ ಕೈಲಾಲಿ ಜಿಲ್ಲೆಯ ಗೋದಾವರಿಯಲ್ಲಿ ಪ್ರಯಾಣಿಕರ ಬಸ್ಸೊಂದನ್ನು ಸಂಘಟನೆ ಸದಸ್ಯರು ಜಖಂಗೊಳಿಸಿದ್ದರು. ಬಂದ್‌ನಿಂದಾಗಿ ಅಚ್ಚಾಂ, ಬೈಟಾಡಿ, ಬಾಜುರಾ, ಬಾಜ್‌ಹಾಂಗ್, ದಾಡೆಲ್‌ಧುರಾ, ದಾರ್ಚುಲಾ ಮತ್ತು ಡೋಟಿ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ, ಶಿಕ್ಷಣ ಸಂಸ್ಥೆ, ಮಾರ್ಕೆಟ್ ಬಂದ್‌ ಆಗಿತ್ತು. ಅದೇ ರೀತಿ ಕೈಗಾರಿಕಾ ಚಟುವಟಿಕೆ, ಸಾಗಣೆ ಮೇಲೂ ಬಂದ್‌ ಬಿಸಿ ತಟ್ಟಿತ್ತು. ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಬಂಧಿತ ಮಾಹಿತಿ ಹುಡುಕಿ