ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಜನರ ಸೇವೆ ಮಾಡೋ ಇಚ್ಛೆ ನನ್ನದು: ಮುಷರ್ರಫ್ (Pakistan | Musharraf | London | Nawaz Sharif)
Bookmark and Share Feedback Print
 
ತನ್ನ ತವರು ನೆಲವಾದ ಪಾಕಿಸ್ತಾನದ ರಾಜಕೀಯಕ್ಕೆ ಮತ್ತೆ ಮರಳುವ ಸಾಧ್ಯತೆ ಇರುವುದಾಗಿ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಮುನ್ಸೂಚನೆ ನೀಡಿದ್ದು, ಪಾಕಿಸ್ತಾನಕ್ಕಾಗಿ ತಾನು ಏನಾದ್ರೂ ಮಾಡಬೇಕೆಂಬ ಇಚ್ಛೆ ಹೊಂದಿರುವುದಾಗಿ ತಿಳಿಸಿದ್ದಾರೆ. ಆದರೆ ತನ್ನ ಹಣೆಬರಹವನ್ನು ಮತದಾರರು ನಿರ್ಧರಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

'ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ ಮತ್ತು ಪಾಕಿಸ್ತಾನದ ಜನರಿಗಾಗಿ ಏನಾದ್ರೂ ಸಹಾಯ ಮಾಡಬೇಕೆಂಬುದು ನನ್ನ ಇಚ್ಚೆ' ಎಂದಿರುವ ಅವರು,ರಾಜಕೀಯಕ್ಕೆ ಮರಳುವ ಮುನ್ಸೂಚನೆ ನೀಡಿದ್ದಾರೆ.

ಒಂಬತ್ತು ವರ್ಷಗಳ ಕಾಲ ಅಧ್ಯಕ್ಷಗಿರಿಯಲ್ಲಿದ್ದ ಮುಷರ್ರಫ್, ಪಾಕಿಸ್ತಾನದಲ್ಲಿ ಚುನಾವಣೆ ನಡೆದ ನಂತರ ಲಂಡನ್‌ಗೆ ಆಗಮಿಸಿದ್ದರು. ಸೋಮವಾರ ಲಂಡನ್‌ನ ಚಿಂತಕರ ಚಾವಡಿ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಮುಷ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪಾಕಿಸ್ತಾನದ ಜನರಿಗಾಗಿ ಏನಾದರೂ ಮಾಡಬೇಕೆಂಬ ಇಚ್ಚೆ ಹೊಂದಿದ್ದು, ತನ್ನ ಭವಿಷ್ಯವನ್ನು ಪಾಕ್ ಜನರೇ ನಿರ್ಧರಿಸಲಿದ್ದಾರೆ ಎಂದು ಹೇಳಿದರು. ಚುನಾವಣೆ ಮೂಲಕವೇ ರಾಜಕೀಯ ಅಖಾಡಕ್ಕೆ ಧುಮುಕುವುದಾಗಿ ಹೇಳಿದ್ದು, ಇದು ನಿಜಕ್ಕೂ ತುಂಬಾ ಉತ್ತಮವಾದ ಹಾದಿ ಎಂದು ನಾನು ಭಾವಿಸುತ್ತೇನೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ