ಆಸೀಸ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ರಕ್ಷಣೆಯ ಹೆದರಿಕೆ: ಸಮೀಕ್ಷೆ
ಮೆಲ್ಬೊರ್ನ್, ಮಂಗಳವಾರ, 16 ಫೆಬ್ರವರಿ 2010( 17:32 IST )
ಕೆಲಸದ ಅಭದ್ರತೆ, ಜನಾಂಗೀಯ ಹಲ್ಲೆ, ಕಳಪೆ ಸಾರಿಗೆ ಅವಕಾಶ ಸೇರಿದಂತೆ ಹಲವಾರು ಕಾರಣಗಳಿಂದಾಗಿ ರಕ್ಷಣೆಯ ಬಗ್ಗೆ ಭಾರತ ಸೇರಿದಂತೆ ಹಲವಾರು ವಿದೇಶಿ ವಿದ್ಯಾರ್ಥಿಗಳು ಬಹಿರಂಗವಾಗಿ ಆತಂಕ ವ್ಯಕ್ತಪಡಿಸಿರುವ ಅಂಶ ನೂತನ ಸಮೀಕ್ಷೆಯಿಂದ ಬಯಲಾಗಿದೆ.
ವಿಕ್ಟೋರಿಯನ್ ಯೂನಿರ್ವಸಿಟಿ ಸುಮಾರು 515ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಸಮೀಕ್ಷೆ ಒಳಪಡಿಸಿತ್ತು. ರಕ್ಷಣೆ ಹಾಗೂ ಜನಾಂಗೀಯ ದಾಳಿ ಕುರಿತಂತೆ 403ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದರು.
ಬಹುತೇಕ ವಿದೇಶಿ ವಿದ್ಯಾರ್ಥಿಗಳು ರಕ್ಷಣೆಗೆ ಸಂಬಂಧಿಸಿದಂತೆ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸುರಕ್ಷಿತ ಮನೆಗಳ ಅಭಾವ, ಉದ್ಯೋಗದಲ್ಲಿ ಹೆಚ್ಚುತ್ತಿರುವ ಅಭದ್ರತೆ ಇರುವುದನ್ನು ಕಂಡುಕೊಂಡಿರುವುದಾಗಿ ದಿ ಕಮ್ಯೂನಿಟಿ ಸೇಫ್ಟಿ ಆಫ್ ಇಂಟರ್‌ನ್ಯಾಷನಲ್ ಸ್ಟುಡೆಂಟ್ಸ್ ಇನ್ ಮೆಲ್ಬೊರ್ನ್ ನೇತೃತ್ವದಲ್ಲಿ ವಿಕ್ಟೋರಿಯನ್ ಯೂನಿವರ್ಸಿಟಿ ಕೈಗೊಂಡಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ವಿದೇಶಿ ವಿದ್ಯಾರ್ಥಿಗಳ ಮೇಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ದಾಳಿ ವಿದ್ಯಾರ್ಥಿಗಳನ್ನು ಹೆಚ್ಚು ಆತಂಕಕ್ಕೆ ದೂಡುವಂತೆ ಮಾಡಿದೆ. ಆ ನಿಟ್ಟಿನಲ್ಲಿ ಕಳೆದ ವರ್ಷ ಜೂನ್‌ನಿಂದ ನವೆಂಬರ್‌ವರೆಗೆ ನಡೆದ ದಾಳಿಯನ್ನು ಸಮೀಕ್ಷೆ ಗಣನೆಗೆ ತೆಗೆದುಕೊಂಡಿರುವುದಾಗಿ ಹೇಳಿದೆ.