ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಂಬ್‌ಸ್ಫೋಟಕ್ಕೆ ಅಮೆರಿಕದ ಮೈತ್ರಿ ಕಾರಣ:ಅಬು ಜಿಂದಾಲ್ (Pune | Blast | Pakistan)
Bookmark and Share Feedback Print
 
ಅಮೆರಿಕದೊಂದಿಗೆ ಭಾರತವಾಗಲಿ ಅಥವಾ ಪಾಕಿಸ್ತಾನವಾಗಲಿ ಮೈತ್ರಿ ಮಾಡಿಕೊಂಡಲ್ಲಿ, ಅಂತಹ ದೇಶಗಳ ವಿರುದ್ಧ ಸಮರ ಸಾರುತ್ತೇವೆ ಎಂದು ಜಿಂದಾಲ್ ಹೇಳಿರುವುದಾಗಿ ಸುಬ್ರಮಣ್ಯಂ ತಿಳಿಸಿದ್ದಾರೆ.

ಪಾಕಿಸ್ತಾನದೊಂದಿಗೆ ಕಾಶ್ಮಿರ ಸಮಸ್ಯೆಯ ಕುರಿತಂತೆ ಮಾತುಕತೆ ನಡೆಸಲು ಭಾರತ ನಿರಾಕರಿಸಿದ ಹಿನ್ನೆಲೆಯಲ್ಲಿ, ಪುಣೆಯಲ್ಲಿ ಬಾಂಬ್‌ಸ್ಫೋಟ ನಡೆಸಿರುವುದಾಗಿ ಲಷ್ಕರ್‌ -ಎ.ತೊಯಿಬಾ ಅಲ್ ಅಲಾಮಿ ಉಗ್ರಗಾಮಿ ಸಂಘಟನೆ ಹೊಣೆಯನ್ನು ಹೊತ್ತುಕೊಂಡಿದೆ.

ಇಸ್ಲಾಮಾಬಾದ್‌ನಲ್ಲಿರುವ ಹಿಂದೂ ಪತ್ರಿಕೆಯ ವರದಿಗಾರ ನಿರುಪಮಾ ಸುಬ್ರಮಣ್ಯಂ ಅವರಿಗೆ ಲಷ್ಕರ್‌ -ಎ.ತೊಯಿಬಾ ಅಲ್ ಅಲಾಮಿ ಉಗ್ರಗಾಮಿ ಸಂಘಟನೆಯ ಅಬು ಜಿಂದಾಲ್ ಎನ್ನುವ ವ್ಯಕ್ತಿ ದೂರವಾಣಿ ಕರೆ ಮಾಡಿ, ಪುಣೆ ಸ್ಫೋಟವನ್ನು ತಮ್ಮ ಸಂಘಟನೆ ನಡೆಸಿರುವುದಾಗಿ ಹೇಳಿಕೆ ನೀಡಿದ್ದಾರೆ

ಪಾಕಿಸ್ತಾನದೊಂದಿಗೆ ಕಾಶ್ಮಿರ ಸಮಸ್ಯೆಯ ಕುರಿತಂತೆ ಮಾತುಕತೆ ನಡೆಸಲು ಭಾರತ ನಿರಾಕರಿಸಿದ ಹಿನ್ನೆಲೆಯಲ್ಲಿ ಪುಣೆಯಲ್ಲಿ ಬಾಂಬ್‌ಸ್ಫೋಟ ನಡೆಸಿರುವುದಾಗಿ ಲಷ್ಕರ್‌ -ಎ.ತೊಯಿಬಾ ಅಲ್ ಅಲಾಮಿ ಉಗ್ರಗಾಮಿ ಸಂಘಟನೆ ಹೊಣೆಯನ್ನು ಹೊತ್ತುಕೊಂಡಿದೆ.

ಲಷ್ಕರ್‌-ಎ-ತೊಯಿಬಾ ಸಂಘಟನೆ ಐಎಸ್‌ಐ ಆದೇಶಗಳನ್ನು ಪಾಲಿಸುತ್ತಿರುವುದರಿಂದ ವಿಭಜನೆಗೊಂಡು ಪ್ರತ್ಯೇಕ ಲಷ್ಕರ್‌ -ಎ.ತೊಯಿಬಾ ಅಲ್ ಅಲಾಮಿ ಸಂಘಟನೆ ಸ್ಥಾಪಿಸಿರುವುದಾಗಿ ಹೇಳಿಕೆ ನೀಡಿದ್ದು, ಅಮೆರಿಕದೊಂದಿಗೆ ಮೈತ್ರಿ ಹಾಗೂ ಇನ್ನಿತರ ಕಾರಣಗಳು ಸ್ಫೋಟ ನಡೆಸಲು ಕಾರಣವಾಗಿವೆ ಎಂದು ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಬಾಂಬ್‌ಸ್ಫೋಟವನ್ನು ಹೇಗೆ ನಡೆಸಲಾಯಿತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಿಂದಾಲ್, ತಮ್ಮ ಸಂಘಟನೆಯ ಸದಸ್ಯರು ಭಾರತದಲ್ಲಿರುವುದರಿಂದ ಅವರನ್ನು ಬಳಸಿಕೊಂಡು ಸ್ಫೋಟ ನಡೆಸಲಾಗಿದೆ ಎಂದು ಜಿಂದಾಲ್ ತಿಳಿಸಿರುವುದಾಗಿ ಹಿಂದೂ ಪತ್ರಿಕೆ ವರದಿಗಾರ ನಿರುಪಮಾ ಸುಬ್ರಮಣ್ಯಂ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ