ಅಮೆರಿಕ ಮತ್ತು ಪಾಕಿಸ್ತಾನ ಜಂಟಿ ಕಾರ್ಯಾಚರಣೆಯಲ್ಲಿ ತಾಲಿಬಾನ್ ಕಮಾಂಡರ್ ಮುಲ್ಲಾ ಬಾರ್ದಾರ್ ಸೆರೆ ಹಿಡಿದಿದೆ. ಹಾಗಂತ ಪಾಕಿಸ್ತಾನ ತಾಲಿಬಾನ್ ಉಗ್ರರ ವಿರುದ್ಧ ಹೋರಾಡುತ್ತಿದೆ ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ ಎಂದು ಅಮೆರಿಕದ ಚಿಂತಕರ ಚಾವಡಿ ಅಭಿಪ್ರಾಯವ್ಯಕ್ತಪಡಿಸಿದೆ.
ಬಾರ್ದಾರ್ ಸೆರೆಯೊಂದಿಗೆ ಪಾಕಿಸ್ತಾನ ತಾಲಿಬಾನ್ ವಿರುದ್ಧ ಹೋರಾಡುತ್ತಿದೆ ಎಂದು ನಂಬುವುದು ಮೂರ್ಖತನವಾದೀತು, ಆ ಸಾಧ್ಯತೆ ನಿಜಕ್ಕೂ ಬಹಳಷ್ಟು ದೂರದಲ್ಲಿದೆ ಎಂದು ತಾಲಿಬಾನ್ ಎರಡನೇ ಪ್ರಮುಖ ವರಿಷ್ಠ ಬಾರ್ದಾರ್ ಬಂಧನ ಕುರಿತಂತೆ ಸ್ಟಾರ್ಟ್‌ಪೋರ್ ತಮ್ಮ ಸುದ್ದಿ ವಿಶ್ಲೇಷಣೆಯಲ್ಲಿ ವಿವರಿಸಿದ್ದಾರೆ.
ಪಾಶ್ಚಾತ್ಯ ಸೈನ್ಯ ಪಡೆಯ ಮೇಲೆ ಪ್ರಭಾವವನ್ನು ಸರಿದೂಗಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಈ ರೀತಿಯಾಗಿ ನಡೆದುಕೊಳ್ಳುತ್ತಿದೆ. ಅಲ್ಲದೇ ಪಾಕಿಸ್ತಾನ ತಾಲಿಬಾನ್ ಮೇಲೆ ಅತಿರೇಕದ ನಂಬಿಕೆ ಇಟ್ಟುಕೊಂಡಿಲ್ಲ. ಅದಕ್ಕೆ ಕೇವಲ ಅಫ್ಘಾನಿಸ್ತಾನದಲ್ಲಿ ತನ್ನ ಕಾರ್ಯಸಾಧಿಸಲು ತಾಲಿಬಾನ್ ಅನ್ನು ಬಳಸಿಕೊಳ್ಳುತ್ತಿದೆ ಎಂದು ದೂರಿದೆ.
ಆ ನಿಟ್ಟಿನಲ್ಲಿ ಅಫ್ಘಾನಿಸ್ತಾನದ ಪಶ್ತುನ್ಸ್‌ನಲ್ಲಿ ತಾಲಿಬಾನ್ ತುಂಬಾ ಪ್ರಭಾವಶಾಲಿಯಾಗಿದೆ. ಹಾಗಾಗಿ ಪಾಕಿಸ್ತಾನಕ್ಕೆ ಬೇರಾವುದೇ ಆಯ್ಕೆಗಳಿಲ್ಲ, ಆ ನಿಟ್ಟಿನಲ್ಲಿ ಪಾಕ್ ತಾಲಿಬಾನ್ ಜತೆಗೂಡಿ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದೆ.