ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಮಾನದಲ್ಲಿ ದಡೂತಿ ಪ್ರಯಾಣಿಕನಿಗೆ ಡಬ್ಬಲ್ ಟಿಕೆಟ್..! (Fat passenger | extra ticket | Southwest Airlines | Kevin Smith)
Bookmark and Share Feedback Print
 
ಭಾರೀ ತೂಕದ ದೇಹ ಹೊಂದಿದ್ದ ಪ್ರಯಾಣಿಕನೊಬ್ಬನಿಗೆ ಎರಡು ಟಿಕೆಟ್ ಖರೀದಿಸಲು ವಿಮಾನಯಾನ ಸಂಸ್ಥೆಯೊಂದು ಸೂಚಿಸಿತ್ತು. ಆದರೆ ಹೆಚ್ಚುವರಿ ಟಿಕೆಟ್ ಪಡೆದುಕೊಳ್ಳಲು ನಿರಾಕರಿಸಿದ್ದನ್ನೇ ಮುಂದೊಡ್ಡಿದ ವಿಮಾನ ಆತನ ಪ್ರಯಾಣಕ್ಕೆ ನಿರಾಕರಿಸಿದ ವಿಶಿಷ್ಟ ಪ್ರಸಂಗವೊಂದು ವರದಿಯಾಗಿದೆ.

ಅಮೆರಿಕಾದ 'ಸೌತ್‌ವೆಸ್ಟ್ ಏರ್‌ಲೈನ್ಸ್' ಎಂಬ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಕೆವಿನ್ ಸ್ಮಿತ್ ಎಂಬಾತ ಆಕ್ಲೆಂಡ್‌ನಿಂದ ಬರ್ಬಾಂಕ್‌ಗೆ ಹೋಗಲೆಂದು ಒಂದು ಟಿಕೆಟ್ ಮಾಡಿದ್ದ. ಆದರೆ ಆತನ ತೂಕವನ್ನು ಗಮನಿಸಿದ ವಿಮಾನವು ಎರಡು ಟಿಕೆಟ್ ಮಾಡುವಂತೆ ಸೂಚಿಸಿತ್ತು. ಒಂದೇ ಸೀಟಿನಲ್ಲಿ ಆತನ ದೇಹಕ್ಕೆ ಜಾಗ ಸಾಲದೇ ಇದ್ದುದೇ ಇದಕ್ಕೆ ಕಾರಣವಾಗಿತ್ತು.

ಆದರೆ ಪ್ರಯಾಣಿಕ ಸ್ಮಿತ್ ಹೆಚ್ಚುವರಿ ಟಿಕೆಟ್ ಮಾಡಲು ನಿರಾಕರಿಸಿದ್ದಾನೆ. ತಾನು ಒಂದೇ ಸೀಟಿನಲ್ಲಿ ಕುಳಿತುಕೊಳ್ಳಬಲ್ಲೆ ಎಂದು ಸ್ಮಿತ್ ವಾದಿಸಿದ ಹೊರತಾಗಿಯೂ ಆತನನ್ನು ಕೆಳಗಿಳಿಸಿ ವಿಮಾನ ಮುಂದಕ್ಕೆ ಪ್ರಯಾಣ ಬೆಳೆಸಿದೆ.

ವಿಮಾನಯಾನ ಸಂಸ್ಥೆಯ ಈ ಉಪಚಾರದಿಂದ ಬೇಸತ್ತಿರುವ ಸ್ಮಿತ್ ತನ್ನ ನೋವನ್ನು ಟ್ವಿಟ್ಟರ್‌ನಲ್ಲಿ ತೋಡಿಕೊಂಡಿದ್ದಾನೆ. 'ನಾನು ದಡೂತಿಯೆಂಬುದು ನನಗೆ ಗೊತ್ತು. ಆದರೆ ಟಿಕೆಟ್ ಮಾಡಿ ಆಸೀನನಾದ ನಂತರ ಪ್ರಯಾಣಿಕನೊಬ್ಬನನ್ನು ಈ ರೀತಿ ಹೊರದಬ್ಬುವುದು ನ್ಯಾಯವೇ. ನಾನು ಯಾವುದೇ ನಿಯಮಗಳನ್ನು ಮುರಿದಿಲ್ಲ. ಸುರಕ್ಷತೆಗೆ ಅಪಾಯವಾಗುವಂತಹ ಕಾರ್ಯಕ್ಕೂ ಇಳಿದಿಲ್ಲ' ಎಂದು ಹೇಳಿಕೊಂಡಿದ್ದಾನೆ.

ಸ್ಮಿತ್ ಪ್ರತಿಭಟನೆಗೆ ಮಣಿದ ವಿಮಾನಯಾನ ಸಂಸ್ಥೆಯು ಮತ್ತೊಂದು ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ. ದಡೂತಿ ಕಾಯ ಹೊಂದಿರುವವರನ್ನು ಬೆಂಬಲಿಸುವ ಸಂಸ್ಥೆಯೊಂದು ಸ್ಮಿತ್ ಸಹಾಯಕ್ಕೆ ಬಂದಿದ್ದು, ವಿಮಾನಯಾನ ಸಂಸ್ಥೆಯ ಕ್ರಮವನ್ನು ತೀವ್ರವಾಗಿ ಖಂಡಿಸಿದೆ.

ಘಟನೆ ನಂತರ 'ಸೌತ್‌ವೆಸ್ತ್ ಏರ್‌ಲೈನ್ಸ್' ಪ್ರಯಾಣಿಕನ ಕ್ಷಮೆ ಕೇಳಿದೆ. ನಮ್ಮ ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಸುವಾಗ ನಿಮಗೆ ಎದುರಾದ ತೊಂದರೆಗೆ ನಾವು ಕ್ಷಮೆ ಯಾಚಿಸುತ್ತಿದ್ದೇವೆ ಎಂದು ಸಂಸ್ಥೆ ಹೇಳಿದೆ. ಆದರೆ ಅಧಿಕ ತೂಕದ ಕಡೆಗಿನ ತನ್ನ ನಿಯಮಗಳನ್ನು ಸಮರ್ಥಿಸಿಕೊಂಡಿರುವ ಸಂಸ್ಥೆ, ಇದು ಕಳೆದ 25 ವರ್ಷಗಳಿಂದ ಜಾರಿಯಲ್ಲಿದೆ ಎಂದು ಹೇಳಿಕೊಂಡಿದೆ.

ನಿಯಮಾವಳಿಗಳ ಪ್ರಕಾರ ಯಾರಿಗೆ ಒಂದು ಸೀಟಿನಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೇ ಇರುವಷ್ಟು ದೊಡ್ಡ ದೇಹವನ್ನು ಹೊಂದಿರುತ್ತಾರೋ ಅವರು ಹೆಚ್ಚುವರಿ ಟಿಕೆಟನ್ನು ಖರೀದಿಸಬೇಕು. ಇದು ನಮ್ಮ ಸಂಸ್ಥೆಯಲ್ಲಿ ಮಾತ್ರ ಇರುವ ನಿಯಮವಲ್ಲ. ಅಲ್ಲದೆ ಇದು ಆದಾಯ ಗಳಿಕೆಯ ಮಾರ್ಗವೂ ಅಲ್ಲ ಎಂದು ಸೌತ್‌ವೆಸ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ