ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಮಹಿಳೆಗೆ ನೀಗ್ರೋ ಎಂದ ಕೆನಡಾ ಉದ್ಯೋಗಿಗೆ ದಂಡ (Canada | racial abuse | Pakistan | Cheryl Khan's)
Bookmark and Share Feedback Print
 
ಕೆನಡಾದ ಕಂಪನಿಯ ಉದ್ಯೋಗಿಯೊಬ್ಬ ಪಾಕಿಸ್ತಾನಿ ಮೂಲದ ಮಹಿಳಾ ಉದ್ಯೋಗಿಗೆ 'ಪಾಕಿ' ಹಾಗೂ 'ನೀಗ್ರೋ' ಎಂದು ಜನಾಂಗೀಯವಾಗಿ ನಿಂದಿಸಿದ ಆರೋಪದ ಮೇಲೆ 25ಸಾವಿರ ಡಾಲರ್ ದಂಡ ವಿಧಿಸಿದ ಘಟನೆ ನಡೆದಿದೆ.

ಅರೆ ನೀಗ್ರೋಗಳಂತಿರುವ ಇಬ್ಬರು ಮಕ್ಕಳ ಜೊತೆ ನೀನು ಅದ್ಯಾವ ರೀತಿಯಲ್ಲಿ ನಿದ್ದೆ ಮಾಡುತ್ತಿಯೋ ಪಾಕ್ ಮಹಿಳೆ ವಿರುದ್ಧ ಕುಹಕವಾಡಿದ್ದ. ತದನಂತರ ಆಕೆಯನ್ನು ಕೆಲಸದಿಂದ ವಜಾಗೊಳಿಸಿದ್ದ ಎಂದು ಆಕೆ ವಿವರಿಸಿದ್ದಾಳೆ.

ತನ್ನನ್ನು ಕಂಪನಿಯ ಬಾಸ್ ಲೈನ್ ಟೋಂಪ್‌ಕಿನ್ಸ್ ಜನಾಂಗೀಯವಾಗಿ ನಿಂದಿಸಿರುವುದಾಗಿ ಚೆರ್ಯಾಲ್ ಖಾನ್ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಚೆರ್ಯಾಲ್‌ಗೆ ಅವಮಾನ ಮಾಡಿದ್ದಕ್ಕೆ 25ಸಾವಿರ ಡಾಲರ್ ಹಾಗೂ ಕಳೆದ ವರ್ಷ ಏಕಾಏಕಿ ಕೆಲಸದಿಂದ ವಜಾಗೊಳಿಸಿರುವುದಕ್ಕೆ 6,750ಡಾಲರ್ ನೀಡುವಂತೆ ಆದೇಶ ನೀಡಿದೆ.

ಅಲ್ಲದೇ ಕಂಪೆನಿಯಲ್ಲಿ ಕಿರುಕುಳ ನಿಗ್ರಹ ನೀತಿಯನ್ನು ಅನುಷ್ಠಾನಗೊಳಿಸುವಂತೆಯೂ ನಿರ್ದೇಶನ ನೀಡಿದ್ದು, ವ್ಯಕ್ತಿತ್ವದಲ್ಲಿಯೂ ಬದಲಾವಣೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದೆ.

ಚೆರ್ಯಾಲ್ ಖಾನ್ 2007ರಲ್ಲಿ ಲೈನಕ್ಸ್ ಟ್ರಕ್ಕಿಂಗ್ ಟ್ರಾನ್ಸ್‌ಪೋರ್ಟ್ ಕಂಪನಿಯಲ್ಲಿ ರವಾನೆಕಾರಳಾಗಿ ಕಾರ್ಯನಿರ್ವಹಿಸುತ್ತಿದ್ದಳು. ಆದರೆ ಈ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ದಕ್ಷಿಣ ಏಷ್ಯಾದವರಿಗೆ ಜನಾಂಗೀಯವಾಗಿ ನಿಂದಿಸಿ ಮಾತನಾಡುತ್ತಿರುವುದಾಗಿ ಹಲವು ಉದ್ಯೋಗಿಗಳು ಟೋರಾಂಟೊ ನ್ಯೂಸ್‌ಗೆ ತಿಳಿಸಿದ್ದಾರೆ.

ಮಾನವ ಹಕ್ಕು ಆಯೋಗದಿಂದ ಖಾನ್ ಪರವಾಗಿ ತೀರ್ಪು ಹೊರಬಿದ್ದ ನಂತರ ಟೊರಾಂಟೊ ಸ್ಟಾರ್‌ಗೆ ಪ್ರತಿಕ್ರಿಯೆ ನೀಡಿ, ತಾನು ಕಳೆದ 35ವರ್ಷಗಳಿಂದ ಕೆನಡಾದಲ್ಲಿ ವಾಸಿಸುತ್ತಿದ್ದೇನೆ. ಆದರೆ ಯಾವತ್ತೂ ಇಂತಹ ಜನಾಂಗೀಯ ಸಂಬಂಧಿ ಅವಮಾನ ನಡೆದಿಲ್ಲವಾಗಿತ್ತು. ಅದು ಶಾಲೆ, ಕೆಲಸ ಮಾಡುವಲ್ಲಿ ಎಲ್ಲಿಯೂ ನಡೆದಿರಲಿಲ್ಲವಾಗಿತ್ತು. ಕೆನಡಾ ಬಹು ಸಂಸ್ಕೃತಿಯ ದೇಶವಾಗಿದೆ. ಆದರೆ ಇದೊಂದು ಆಘಾತಕಾರಿ ಘಟನೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ