ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದುಬೈ: ಹಮಾಸ್ ಹಂತಕರು ಆಸ್ಟ್ರಿಯಾ ಫೋನ್ ಬಳಸಿದ್ದರು (Dubai killers | Austrian phone cards | Hamas militant | Mossad)
Bookmark and Share Feedback Print
 
ದುಬೈನಲ್ಲಿ ಹಮಾಸ್ ನಾಯಕನನ್ನು ಹತ್ಯೆಗೈಯುವ ಯೋಜನೆ ರೂಪಿಸಲು ಹಂತಕರು ಆಸ್ಟ್ರಿಯಾದ ದೂರವಾಣಿ ಸಂಖ್ಯೆಗಳನ್ನು ಬಳಸಿದ್ದರೇ ಎಂಬುದನ್ನು ಶೀಘ್ರದಲ್ಲೇ ಖಚಿತಪಡಿಸುತ್ತೇವೆ, ಈ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಆಸ್ಟ್ರಿಯಾ ಆಂತರಿಕ ಸಚಿವರು ತಿಳಿಸಿದ್ದಾರೆ.

ರಾಷ್ಟ್ರೀಯ ಸುರಕ್ಷತಾ ಮತ್ತು ಭಯೋತ್ಪಾದನಾ ವಿರೋಧಿ ದಳವು ಈ ಕುರಿತು ತನಿಖೆಗಳನ್ನು ನಡೆಸುತ್ತಿದೆ ಎಂಬುದನ್ನು ಖಚಿತಪಡಿಸುತ್ತಿದ್ದೇನೆ. ಆಸ್ಟ್ರಿಯಾದ ಫೋನ್ ನಂಬರುಗಳನ್ನು ಬಳಸಿರುವುದು ಹೌದು. ಆದರೆ ಹೆಚ್ಚಿನ ಮಾಹಿತಿಗಳನ್ನು ಈಗಲೇ ನೀಡಲಾರೆ. ನಾವು ದುಬೈ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ. ತನಿಖೆಗಳು ನಡೆಯುತ್ತಿವೆ ಎಂದು ಸಚಿವಾಲಯದ ವಕ್ತಾರ ರುಡಾಲ್ಫ್ ಗೋಲಿಯಾ ಮಾಹಿತಿ ನೀಡಿದ್ದಾರೆ.

ಹಮಾಸ್ ಮಿಲಿಟರಿ ವಿಭಾಗದ ಹಿರಿಯ ಅಧಿಕಾರಿ ಮಹಮೌದ್ ಅಲ್ ಮಬೌ ಅವರನ್ನು ಜನವರಿ 20ರಂದು ದುಬೈ ಹೊಟೇಲಿನ ಅವರು ಉಳಿದುಕೊಂಡಿದ್ದ ಕೋಣೆಯಲ್ಲಿ ಕೊಲ್ಲಲಾಗಿತ್ತು. ಇದು ಇಸ್ರೇಲ್ ಗುಪ್ತಚರ ಸಂಸ್ಥೆ 'ಮೊಸಾದ್' ಕೃತ್ಯ ಎಂದು ದುಬೈ ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ 11 ಮಂದಿಯ ಭಾವಚಿತ್ರ ಹಾಗೂ ಪಾಸ್‌ಪೋರ್ಟ್‌ಗಳನ್ನು ಕೂಡ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ಹಮಾಸ್ ಉಗ್ರ ನಾಯಕನ ಹತ್ಯೆ ಸಂಚು ರೂಪಿಸಲು ಹಂತಕರು ಆಸ್ಟ್ರಿಯಾದ ಕನಿಷ್ಠ ಒಂದು ಸಿಮ್ ಬಳಸಿದ್ದಾರೆ. 2008ರ ಮುಂಬೈ ದಾಳಿ ಸಂಚಿನಲ್ಲೂ ಆಸ್ಟ್ರಿಯಾದ ಸಿಮ್ ಬಳಕೆಯಾಗಿರುವುದು ಪತ್ತೆಯಾಗಿತ್ತಾದರೂ, ಈ ಕುರಿತು ಯಾವುದೇ ಸಾಕ್ಷ್ಯಗಳು ಲಭ್ಯವಾಗಿರಲಿಲ್ಲ.

ಇತ್ತ ತೀವ್ರ ಟೀಕೆಗಳನ್ನು ಎದುರಿಸುತ್ತಿರುವ ಇಸ್ರೇಲ್‌ನ 'ಮೊಸಾದ್' ಮುಖ್ಯಸ್ಥ ಮಿರ್ ಡಗಾನ್, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ. ಅಲ್ಲದೆ ಇಸ್ರೇಲ್ ಪ್ರಧಾನ ಮಂತ್ರಿಯವರೂ ರಾಜೀನಾಮೆಗೆ ಒತ್ತಾಯಿಸುವ ಸಾಧ್ಯತೆಗಳು ಕಡಿಮೆ ಎಂದು ವರದಿಗಳು ಹೇಳಿವೆ.

ಹಮಾಸ್ ಕಮಾಂಡರ್ ಹತ್ಯೆಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಇಸ್ರೇಲ್, ತನ್ನ ಗುಪ್ತಚರ ಸಂಘಟನೆಯ ಕೃತ್ಯವೆಂದು ಆಪಾದಿಸುತ್ತಿರುವುದರ ಬಗ್ಗೆಯೂ ತುಟಿ ಬಿಚ್ಚುತ್ತಿಲ್ಲ.

'ಮೊಸಾದ್'ನ ಸದಸ್ಯರೇ ಈ ಹತ್ಯೆಯಲ್ಲಿ ಪಾಲ್ಗೊಂಡಿದ್ದರೂ, ಇತರೆ ದೇಶಗಳ ಪಾಸ್‌ಪೋರ್ಟ್‌ಗಳು ಹಾಗೂ ಹಲವು ಇಸ್ರೇಲಿಗರ ದ್ವಿಪೌರತ್ವ ಹೊಂದಿರುವ ಪಾಸ್‌ಪೋರ್ಟ್‌ಗಳನ್ನು ನಕಲು ಮಾಡಿ ಕೃತ್ಯ ನಡೆಸಿದೆ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ