ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಈಜಿಪ್ಟ್ ಉನ್ನತ ಕೋರ್ಟ್‌ನಲ್ಲಿ ಮಹಿಳಾ ಜಡ್ಜ್‌ಗೆ ಅವಕಾಶವಿಲ್ಲ! (Women | Egypt top court | Female judges | Cairo)
Bookmark and Share Feedback Print
 
ಉನ್ನತ ನ್ಯಾಯಾಲಯದಲ್ಲಿ ಮಹಿಳಾ ನ್ಯಾಯಾಧೀಶರಿಗೆ ಅವಕಾಶ ಇಲ್ಲ ಎಂಬ ಈಜಿಪ್ಟ್ ನ್ಯಾಯಾಧೀಶರ ಮಂಡಳಿ ನಿರ್ಧಾರದ ವಿರುದ್ಧ ಈಜಿಪ್ಟ್ ನ್ಯಾಷನಲ್ ಕೌನ್ಸಿಲ್ ಫಾರ್ ವುಮೆನ್(ಎನ್‌ಸಿಡಬ್ಲ್ಯು) ತೀವ್ರ ವಿರೋಧ ವ್ಯಕ್ತಪಡಿಸಿದೆ.

ನ್ಯಾಯಾಲಯಗಳಲ್ಲಿ ಮಹಿಳೆಯರಿಗೆ ಅವಕಾಶ ಇಲ್ಲ ಎಂಬ ಕೌನ್ಸಿಲ್ ಆಫ್ ಸ್ಟೇಟ್ ನಿರ್ಧಾರದ ಕುರಿತಂತೆ ಎನ್‌ಸಿಡಬ್ಲ್ಯು ಗುರುವಾರ ತುರ್ತು ಸಭೆ ನಡೆಸಿದ್ದು, ದೇಶದ ಸರ್ವೋಚ್ಛ ನ್ಯಾಯಾಲಯ ಈ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.

ಆ ನಿಟ್ಟಿನಲ್ಲಿ ಮಹಿಳೆಯರ ಹಕ್ಕುಗಳ ಪರವಾಗಿ ಎನ್‌ಜಿಓಗಳ ಪ್ರತಿಭಟನೆ ತುಂಬಾ ಖುಷಿ ತಂದಿದೆ ಎಂದು ಎನ್‌ಸಿಡಬ್ಲ್ಯು ಅಧ್ಯಕ್ಷೆ ಫರ್ಖಾನ್‌ದಾ ಹಸನ್ ತಿಳಿಸಿದ್ದಾರೆ.

ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳುವುದರ ವಿರುದ್ಧ ಕೌನ್ಸಿಲ್ ಆಫ್ ಸ್ಟೇಟ್ಸ್ ಅಸೋಸಿಯೇಶನ್ ನಿರ್ಣಯ ಕೈಗೊಂಡಿತ್ತು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ 380 ನ್ಯಾಯಾಧೀಶರಲ್ಲಿ ಮಹಿಳಾ ನ್ಯಾಯಾಧೀಶರ ನೇಮಕ ವಿರೋಧಿಸಿ 334 ಮಂದಿ ವಿರೋಧವಾಗಿ ಮತ ಚಲಾಯಿಸಿದ್ದು, ಕೇವಲ 42ಮಂದಿ ಒಪ್ಪಿಗೆ ಸೂಚಿಸಿದ್ದರು. ನಾಲ್ಕು ಮಂದಿ ಸಭೆಗೆ ಗೈರುಹಾಜರಾಗಿದ್ದರು.

ಇತ್ತೀಚೆಗಷ್ಟೇ ಈಜಿಪ್ಟ್‌ನಲ್ಲಿ ಬುರ್ಖಾ ಧರಿಸುವ ಬಗ್ಗೆ ಸರ್ಕಾರ ವಿರೋಧ ವ್ಯಕ್ತಪಡಿಸುವ ಮೂಲಕ ವಿವಾದ ಹುಟ್ಟುಕೊಂಡಿತ್ತು. ಇದೀಗ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಾಧೀಶರ ನೇಮಕಾತಿ ಇಲ್ಲ ಎಂಬ ನಿರ್ಧಾರ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ