ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ಕಮಾಂಡರ್ ಸಹಚರನ ಬಂಧನ ನಿರಾಕರಿಸಿದ ಪಾಕ್ (Taliban commander | Pakistan | Mullah Abdul Ghani Baradar | Mullah Abdul Salam)
Bookmark and Share Feedback Print
 
ತಾಲಿಬಾನ್ ಅಗ್ರ ಕಮಾಂಡರ್ ಮುಲ್ಲಾ ಅಬ್ದುಲ್ ಗಾನಿ ಬಾರಾದಾರ್ ಸಹಚರನೊಬ್ಬನನ್ನು ಪಂಜಾಬ್ ಪ್ರಾಂತ್ಯದಲ್ಲಿ ಬಂಧಿಸಲಾಗಿದೆ ಎಂದು ಅಫಘಾನಿಸ್ತಾನದ ಕುಂದುಜ್ ಪ್ರಾಂತ್ಯದ ರಾಜ್ಯಪಾಲರು ನೀಡಿರುವ ಹೇಳಿಕೆಯನ್ನು ಪಾಕಿಸ್ತಾನ ತಳ್ಳಿ ಹಾಕಿದೆ.

ಮುಲ್ಲಾ ಅಬ್ದುಲ್ ಸಲಾಂ ಎಂಬಾತನನ್ನು ಲಾಹೋರ್‌ನಿಂದ 100 ಕಿಲೋ ಮೀಟರ್ ದೂರದಲ್ಲಿರುವ ಫೈಸಲಾಬಾದ್‌ನಲ್ಲಿ ಸೆರೆ ಹಿಡಿಯಲಾಗಿದೆ ಎಂದು ಅಫ್ಘಾನ್ ಅಧಿಕಾರಿ ಹೇಳಿಕೊಂಡಿದ್ದರು.

ಪಾಕಿಸ್ತಾನ ಬಂಧಿಸಿದೆ ಎನ್ನಲಾಗಿರುವ ಸಲಾಂ ತಾಲಿಬಾನ್‌ನ ಛಾಯಾ ಸರಕಾರದ ರಾಜ್ಯಪಾಲ ಎಂದು ಹೇಳಲಾಗಿದ್ದು, ಆತ ನಿಧಿ ಸಂಗ್ರಹಿಸುವುದು, ಇಸ್ಲಾಮಿಕ್ ಕಾನೂನನ್ನು ಜಾರಿಗೊಳಿಸುವುದು, ತೆರಿಗೆ ಸಂಗ್ರಹ ಮತ್ತು ಶರಿಯತ್ ನ್ಯಾಯಾಲಯಗಳನ್ನು ನಡೆಸುತ್ತಿದ್ದ ಎಂದು ಹೇಳಲಾಗಿದೆ.

ಮುಲ್ಲಾ ಅಬ್ದುಲ್ ಸಲಾಂ ಎಂಬ ಹೆಸರಿನ ಯಾವುದೇ ತಾಲಿಬಾನ್ ಕಮಾಂಡರ್‌ನನ್ನು ಪೊಲೀಸರು ಅಥವಾ ಬೇಹುಗಾರಿಕಾ ವಿಭಾಗಗಳು ಬಂಧಿಸಿಲ್ಲ ಎಂದು ಪಂಜಾಬ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ತಾಹಿರ್ ತಿಳಿಸಿದ್ದಾರೆ.

ಅಲ್ಲದೆ ಫೈಸಲಾಬಾದ್‌ನಲ್ಲಿ ಅಮೆರಿಕಾದ ಎಫ್‌ಬಿಐ ತನಿಖಾ ದಳ ಆಶ್ರಯ ಕಂಡುಕೊಂಡಿದೆ ಎಂಬ ವರದಿಗಳನ್ನೂ ತಳ್ಳಿ ಹಾಕಿದ್ದಾರೆ.

ತಾಲಿಬಾನ್‌ನ ಮುಖ್ಯಸ್ಥ ಮುಲ್ಲಾ ಮೊಹಮ್ಮದ್ ಒಮರ್ ನಂತರದ ಎರಡನೇ ಅಗ್ರ ಕಮಾಂಡರ್ ಮುಲ್ಲಾ ಬಾರಾದಾರ್‌ನನ್ನು ಪಾಕಿಸ್ತಾನ ಮತ್ತು ಅಮೆರಿಕಾ ಜಂಟಿ ಕಾರ್ಯಪಡೆಗಳು ಬಂಧಿಸಿದ ನಂತರ ತಾಲಿಬಾನ್‌ನ ಸ್ವಘೋಷಿತ ರಾಜ್ಯಪಾಲನನ್ನೂ ಸೆರೆ ಹಿಡಿಯಲಾಗಿದೆ ಎಂದು ವರದಿಗಳು ಹೇಳಿದ್ದವು.

ಬಾರಾದಾರ್‌ನ್ನು ಅಮೆರಿಕಾ ಮತ್ತು ಪಾಕಿಸ್ತಾನದ ಪಡೆಗಳು ಕರಾಚಿಯಲ್ಲಿ ಸೆರೆ ಹಿಡಿದದ್ದನ್ನು ಇತ್ತೀಚೆಗಷ್ಟೇ ಅಮೆರಿಕಾ ಮತ್ತು ಪಾಕಿಸ್ತಾನ ಖಚಿತಪಡಿಸಿವೆ. ಬಾರಾದಾರ್ ನೀಡಿದ ಮಾಹಿತಿಗಳನ್ನಾಧರಿಸಿ ಸಲಾಂನನ್ನು ಬಂಧಿಸಲಾಯಿತು ಎಂದು ಮೂಲಗಳು ಹೇಳಿವೆ. ಆದರೆ ಇದನ್ನು ಪಾಕಿಸ್ತಾನ ನಿರಾಕರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ