ಒಡಹುಟ್ಟಿದ ತಂಗಿಯ ಮೇಲೆಯೇ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಅಣ್ಣನಿಗೆ ಸಿಂಗಾಪುರ್ ನ್ಯಾಯಾಲಯ 13ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
21ರ ಹರೆಯದ ಸಹೋದರ ತನ್ನ ತಂಗಿಯನ್ನೇ ಲೈಂಗಿಕ ತೃಷೆಗಾಗಿ ಬಳಸಿಕೊಂಡಿದ್ದ, ತಂಗಿಗೆ ಈಗ 16ರ ಹರೆಯ. ಅಣ್ಣನಿಂದ ತಂಗಿಯೇ ಲೈಂಗಿಕ ದೌರ್ಜನ್ಯಕ್ಕೆ ಈಡಾಗಿರುವ ಕಾರಣದಿಂದ ಆತನ ಹೆಸರನ್ನು ಬಹಿರಂಗಪಡಿಸಿಲ್ಲ ಎಂದು ವರದಿ ಹೇಳಿದೆ. 2005 ಅಥವಾ 2006ರಲ್ಲಿ ಅಣ್ಣ ತಂಗಿಯ ಮೇಲೆ ಲೈಂಗಿಕ ಶೋಷಣೆ ನಡೆಸುತ್ತಿದ್ದ ಎಂದು ಸ್ಟ್ರೈಟ್ಸ್ ಟೈಮ್ಸ್ ವರದಿ ವಿವರಿಸಿದೆ.
ಮೂರು ಮಂದಿ ಸಹೋದರರ ಜೊತೆ ವಾಸವಾಗಿರುವ ತಂಗಿಯ ತಂಗಿಯ ಮೇಲೆ ಅಣ್ಣ ನಿರಂತರವಾಗಿ 2007ರವರೆಗೆ ಅತ್ಯಾಚಾರ ನಡೆಸುತ್ತಿದ್ದ. ಆಕೆ ಮನೆಯನ್ನು ತೊರೆದು ತನ್ನ ಪ್ರಿಯತಮನ ಜೊತೆ ಹೋಗುವವರೆಗೂ ಅಣ್ಣ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂದು ವರದಿ ಹೇಳಿದೆ. ಅಣ್ಣನ ಮೃಗೀಯ ವರ್ತನೆಯನ್ನು ತಂಗಿ ಕಳೆದ ಏಪ್ರಿಲ್ ತಿಂಗಳವರೆಗೆ ಯಾರಲ್ಲಿಯೂ ಬಾಯ್ಬಿಟ್ಟಿರಲಿಲ್ಲವಾಗಿತ್ತು. ನಂತರ ಪ್ರಿಯತಮನ ಮನೆ ಸೇರಿದ ನಂತರ ಅಣ್ಣನ ವಿರುದ್ಧ ದೂರು ನೀಡಿದ್ದಳು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆತನಿಗೆ 13ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ ಎಂದು ಸ್ಟ್ರೈಟ್ ಟೈಮ್ಸ್ ವರದಿ ಹೇಳಿದೆ.