ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶೀಘ್ರದಲ್ಲೇ ಎಲ್‌ಟಿಟಿಇ ಬಾಲ ಯೋಧರ ಬಿಡುಗಡೆ: ಶ್ರೀಲಂಕಾ (Sri Lanka | child soldiers | LTTE | Liberation Tigers of Tamil Eelam)
Bookmark and Share Feedback Print
 
ಪ್ರಸಕ್ತ ಪುನಶ್ಚೇತನ ಶಿಬಿರಗಳಲ್ಲಿರುವ ಎಲ್ಲಾ ಮಾಜಿ ಎಲ್‌ಟಿಟಿಇ ಬಾಲ ಯೋಧರನ್ನು ಮೇ 10ರೊಳಗೆ ಬಿಡುಗಡೆ ಮಾಡುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಶ್ರೀಲಂಕಾ ಸರಕಾರ ತಿಳಿಸಿದೆ.

ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ ನೆಲಕಚ್ಚುತ್ತಿದ್ದಂತೆ ಲಂಕಾ ಸೇನೆಯೆದುರು 18 ವರ್ಷದೊಳಗಿನ ಸುಮಾರು 510 ಬಾಲ ಯೋಧರು ಶರಣಾಗಿದ್ದರು. ನ್ಯಾಯಾಲಯದ ಆದೇಶದಂತೆ ಅವರನ್ನು ಒಂದು ವರ್ಷ ಅವಧಿಯ ಪುನಶ್ಚೇತನ ಶಿಬಿರಕ್ಕೆ ಸೇರಿಸಲಾಗಿದೆ.

ಇತ್ತೀಚೆಗಷ್ಟೇ ಸರಕಾರವು 150 ಬಾಲ ಯೋಧರನ್ನು ಅವರ ಹೆತ್ತವರು ಮತ್ತು ಪೋಷಕರಿಗೆ ಹಸ್ತಾಂತರಿಸಿದೆ. ಇನ್ನುಳಿದಂತೆ 273 ಮಕ್ಕಳು ಕೊಲೊಂಬೊದ ಉಪನಗರ ರತ್ಮಾಲನಾ ಎಂಬಲ್ಲಿನ ಕೇಂದ್ರವೊಂದರಲ್ಲಿ ಅಧ್ಯಯನ ಮುಂದುವರಿಸಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ರಕ್ಷಣಾ ಪ್ರಾಧಿಕಾರದ ಅಧ್ಯಕ್ಷ ಜಗತ್ ವೆಲಾವತೆ ತಿಳಿಸಿದ್ದಾರೆ.

ಎಲ್ಲಾ ಬಾಲ ಯೋಧರನ್ನು 2010ರ ಮೇ ತಿಂಗಳೊಳಗೆ ಬಿಡುಗಡೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ದೇಶೀಯ ಆಂಗ್ಲ ಪತ್ರಿಕೆ 'ಡೈಲೀ ನ್ಯೂಸ್' ತನ್ನ ವರದಿಯಲ್ಲಿ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿದೆ.

ಪುನಶ್ಚೇತನಗೊಂಡ ತಮ್ಮ ಮಕ್ಕಳನ್ನು ಕೆಲವು ಹೆತ್ತವರು ಸ್ವೀಕರಿಸಲು ಸಿದ್ಧರಿರದೇ ಇರುವ ಪ್ರಸಂಗಗಳೂ ನಡೆದಿವೆ. ಇಂತಹ ಸಂದರ್ಭಗಳಲ್ಲಿ ಸರಕಾರವು ಈ ಮಾಜಿ ಬಾಲ ಯೋಧರನ್ನು ಮ್ಯಾಜಿಸ್ಟ್ರೇಟರ ಎದುರು ಹಾಜರುಪಡಿಸಿ, ಅವರ ಆದೇಶದಂತೆ ನಡೆಸಿಕೊಳ್ಳಲಾಗುತ್ತದೆ ಎಂದು ಜಗತ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ