ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದನೆ ವಿರುದ್ಧದ ಸಮರದಿಂದ ಭಾರೀ ನಷ್ಟ: ಪಾಕ್ (war on terror | Pakistan | Minister of State for Economic Affairs | Hina Rabbani Khar)
Bookmark and Share Feedback Print
 
ಕಳೆದ ಮೂರು ವರ್ಷಗಳಿಂದ ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧದ ಸಮರಕ್ಕಾಗಿ ಹೆಚ್ಚುಕಡಿಮೆ 35 ಬಿಲಿಯನ್ ಅಮೆರಿಕನ್ ಡಾಲರುಗಳನ್ನು ವ್ಯಯಿಸಿದೆ ಎಂದು ಪಾಕಿಸ್ತಾನದ ಆರ್ಥಿಕ ವ್ಯವಹಾರಗಳ ರಾಜ್ಯ ಸಚಿವೆ ಹೀನಾ ರಬ್ಬಾನಿ ಖಾರ್ ತಿಳಿಸಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ಹೋರಾಟದಿಂದ ಪಾಕಿಸ್ತಾನವು ಭಾರೀ ನಷ್ಟಕ್ಕೀಡಾಗಿದೆ. ಒಟ್ಟಾರೆ ನ್ಯಾಟೋ ಜಂಟಿ ಪಡೆಗಳಲ್ಲಿ ಉಂಟಾದ ಸಾವಿಗಿಂತಲೂ ಪಾಕಿಸ್ತಾನದ ಸಾವಿನ ಸಂಖ್ಯೆಯೇ ಹೆಚ್ಚು ಎಂದು ಖಾರ್ ಹೇಳಿದ್ದಾರೆಂದು 'ಡೈಲಿ ಟೈಮ್ಸ್' ವರದಿ ಮಾಡಿದೆ.

ಇಟಲಿಯ ಆರ್ಥಿಕ ಮತ್ತು ವಿತ್ತ ಉಪ ಸಚಿವ ಗಿಸೆಪ್ಪೆ ವೇಗಾಸ್ ಅವರೊಂದಿಗಿನ ಮಾತುಕತೆಯ ನಂತರ ಹೇಳಿಕೆ ನೀಡಿರುವ ಪಾಕಿಸ್ತಾನದ ಯುವ ಸಚಿವೆ, ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕಾಗಿ ಅತಿ ಹೆಚ್ಚು ಹಣವನ್ನು ವ್ಯಯಿಸಲಾಗುತ್ತಿರುವುದರಿಂದ ಮುಂದಿನ ಆರ್ಥಿಕ ವರ್ಷದಲ್ಲಿ ಸಾರ್ವಜನಿಕ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಹೆಚ್ಚಿನ ಮೊತ್ತ ಮೀಸಲಿಡುವುದು ಸಾಧ್ಯವಾಗುತ್ತಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ವೇಗಾಸ್, ಪಾಕಿಸ್ತಾನದಲ್ಲಿ ಹೂಡಿಕೆ ಮಾಡಲು ಇಟಲಿಯ ಉದ್ಯಮಿಗಳು ಮತ್ತು ವ್ಯಾಪಾರಿ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಗಿಲ್ಜಿತ್-ಬಾಲ್ತಿಸ್ತಾನ್‌ನಲ್ಲಿನ ಹಲವು ಅಭಿವೃದ್ಧಿ ಯೋಜನೆಗಳಲ್ಲಿ ಅದರಲ್ಲೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿಯನ್ನೂ ಅವರು ತೋರಿಸಿದ್ದಾರೆ.

ಅಮೆರಿಕಾ ತನ್ನ ಮೈತ್ರಿ ದೇಶಗಳ ಪಡೆಗಳೊಂದಿಗೆ ಪಾಕಿಸ್ತಾನದ ಸಹಕಾರದಿಂದ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಮತ್ತು ಅಪಘಾನಿಸ್ತಾನಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಉಗ್ರರ ವಿರುದ್ಧ ಹೋರಾಟಕ್ಕೆ ಸಹಕರಿಸುತ್ತಿರುವುದಕ್ಕೆ ಪಾಕಿಸ್ತಾನಕ್ಕೆ ಅಮೆರಿಕಾವು ಭಾರೀ ಆರ್ಥಿಕ ಹಾಗೂ ಯುದ್ಧ ತಂತ್ರಜ್ಞಾನಗಳ ನೆರವನ್ನು ನೀಡುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ