ತೀವ್ರ ಆಕ್ಷೇಪದ ನಡುವೆಯೂ ಧಾರ್ಮಿಕ ಗುರು ದಲೈಲಾಮಾ ಅವರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿಯಾಗಿ ಮಾತುಕತೆ ನಡೆಸಿರುವುದಕ್ಕೆ ಕಿಡಿಕಾರಿರುವ ಚೀನಾ, ಟಿಬೆಟ್ ಸ್ವಾತಂತ್ರ್ಯದ ಬಗ್ಗೆ ಮಾತನಾಡಲು ಲಾಮಾಗೆ ನೈತಿಕ ಹಕ್ಕಿಲ್ಲ ಎಂದು ಆರೋಪಿಸಿದೆ. ಯಾಕೆಂದರೆ ತಾನು ಭಾರತದ ಮಣ್ಣಿನ ಮಗ ಎಂದು ಅವರೇ ಸ್ವತಃ ಘೋಷಿಸಿಕೊಂಡಿದ್ದಾರೆಂದು ಹೇಳಿದೆ.
ಟಿಬೆಟ್ ಧರ್ಮ, ಸಂಸ್ಕೃತಿ ಹಾಗೂ ಭಾಷೆಯನ್ನು ರಕ್ಷಿಸಲು ದಲೈಲಾಮಾ ಅವರು ಹೋರಾಡುತ್ತಿರುವುದಾಗಿ ಕೆಲವು ವಿದೇಶಿ ಸಂಘಟನೆಗಳು ಬೆಂಬಲ ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಚೀನಾ, ದಲೈಲಾಮಾ ಅವರು ನಿಜಕ್ಕೂ ಟಿಬೆಟಿಗರೇ ಎಂದು ಚೀನಾದ ಅಧಿಕೃತ ಮಾಧ್ಯಮದಲ್ಲಿ ಪ್ರಶ್ನಿಸಿರುವುದಾಗಿ ಪೀಪಲ್ಸ್ ಡೈಲಿ ವೆಬ್‌ಸೈಟ್‌ನ ವರದಿ ತಿಳಿಸಿದೆ.
ಕಳೆದ ವರ್ಷ ಅರುಣಾಚಲಪ್ರದೇಶಕ್ಕೆ ದಲೈಲಾಮಾ ಅವರು ಭೇಟಿ ನೀಡಿದ ಸಂದರ್ಭದಲ್ಲಿ, ನಾನು ಭಾರತದ ಮಣ್ಣಿನ ಮಗ, ಆ ನಿಟ್ಟಿನಲ್ಲಿ ನಾನು ಭಾರತವನ್ನು ಗೌರವಿಸುತ್ತೇನೆ. ಆದರೂ ನಾನು ಟಿಬೆಟಿಗ ಯಾಕೆಂದರೆ ನನ್ನ ಹೆತ್ತವರು ಟಿಬೆಟಿಯನ್ನರು. ಆದರೆ ತಾನು ಧಾರ್ಮಿಕವಾಗಿ ಭಾರತೀಯ ಎಂದು ಬಹಿರಂಗವಾಗಿ ತಿಳಿಸಿರುವುದಾಗಿ ವರದಿ ಮಾಡಿರುವುದಾಗಿ ವೆಬ್‌ಸೈಟ್ ಹೇಳಿದೆ.
2007ರಲ್ಲಿ ಅರುಣಾಚಲಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಅರುಣಾಚಲ ಪ್ರದೇಶ ಭಾರತದ ಭಾಗ ಎಂದು ಹೇಳಿದ್ದು, ಚೀನಾ ಅತಿಕ್ರಮಣ ಮಾಡುತ್ತಿದೆ ಎಂದು ಆರೋಪಿಸಿದ್ದರು. ಆದರೆ ಅರುಣಾಚಲ ಮತ್ತು ಮೆಕ್‌ಮಹಾನ್ ದಕ್ಷಿಣ ಟಿಬೆಟ್‌ನ ಭಾಗವಾಗಿದೆ ಎಂದು ಚೀನಾ ಪ್ರತಿಪಾದಿಸಿದೆ.