ಮ್ಯಾಡ್ರಿಡ್, ಭಾನುವಾರ, 21 ಫೆಬ್ರವರಿ 2010( 10:54 IST )
ಭೀಕರ ಚಂಡಮಾರುತ, ಮಳೆ ಹಾಗೂ ಪ್ರವಾಹದಿಂದಾಗಿ ಪೋರ್ಚುಗೀಸ್ ದ್ವೀಪಪ್ರದೇಶ ಸಂಪೂರ್ಣ ತತ್ತರಿಸಿಹೋಗಿದ್ದು, ಸುಮಾರು 32ಮಂದಿ ಸಾವನ್ನಪ್ಪಿದ್ದಾರೆಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ದ್ವೀಪರಾಷ್ಟ್ರದ ಪ್ರಮುಖ ನಗರವಾದ ಫುನ್‌ಚಾಲ್‌ನಲ್ಲಿ 68ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಡೇರಿಯಾ ರೀಜನಲ್ ಸರ್ಕಾರದ ಉಪಾಧ್ಯಕ್ಷ ಜೋವೋ ಕುನಾಹ್ ಇ ಸಿಲ್ವಾ ಅವರು ಲುಸಾ ಏಜೆನ್ಸಿ ಸುದ್ದಿಸಂಸ್ಥೆಗೆ ವಿವರಿಸಿರುವುದಾಗಿ ಹೇಳಿದೆ.
ಮಡೇರಿಯಾ ಪೋರ್ಚುಗೀಸ್‌ನ ಪ್ರಮುಖ ದ್ವೀಪ ಪ್ರದೇಶವಾಗಿದೆ. ಪ್ರವಾಹದಿಂದ ಕೆಳ ಅಂತಸ್ತಿನಲ್ಲಿರುವ ಮನೆಗಳಲ್ಲೆ ನೀರಿನಿಂದ ತುಂಬಿಹೋಗಿದ್ದು, ಶನಿವಾರ ಬೀಸಿದ ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳ ಮೇಲೆ ಮರಗಳು ಬಿದ್ದ ಪರಿಣಾಮ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಕೆಲವು ಸೇತುವೆಗಳು ಪ್ರವಾಹದ ನೀರಿನಲ್ಲಿ ಮುಳುಗಿ ಹೋಗಿರುವುದಾಗಿ ವರದಿ ತಿಳಿಸಿದೆ.