ಕಾನೂನು ಚೌಕಟ್ಟು ಮೀರಿ ಲೈಂಗಿಕ ಸಂಬಂಧಿ ವಾಣಿಜ್ಯ ಜಾಹೀರಾತುಗಳನ್ನು ಪ್ರದರ್ಶಿಸದಂತೆ ಚೀನಾ ಟೆಲಿವಿಷನ್ ವಾಚ್ ಡಾಗ್ ಎಚ್ಚರಿಕೆ ನೀಡಿದೆ.
ಔಷಧ, ಮೆಡಿಕಲ್ ಸಾಧನ ಮತ್ತು ಆರೋಗ್ಯ ಸಂಬಂಧಿ ವಾಣಿಜ್ಯ ಜಾಹೀರಾತುಗಳಲ್ಲಿ ಲೈಂಗಿಕವಾಗಿ ಒತ್ತು ನೀಡಿದರೆ, ಅಂತಹ ಟಿವಿ ಮತ್ತು ರೇಡಿಯೋಗಳ ಅನುಮತಿಯನ್ನು ರದ್ದುಪಡಿಸುವುದಾಗಿ ಸ್ಟೇಟ್ ಅಡ್ಮಿನಿಸ್ಟ್ರೇಶನ್ ಆಫ್ ರೇಡಿಯೋ, ಫಿಲ್ಮ್ ಮತ್ತು ಟೆಲಿವಿಷನ್(ಎಸ್‌ಎಆರ್‌ಎಫ್‌ಟಿ ಶನಿವಾರ ಪ್ರಕಟಣೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ವಾಣಿಜ್ಯ ಸಂಬಂಧಿ ಜಾಹೀರಾತು ಪ್ರಸಾರದಲ್ಲಿ ಲೈಂಗಿಕ ಉದ್ದೀಪನ ಅಂಶ ಕಂಡು ಬಂದಲ್ಲಿ ಅದನ್ನು ಅಪರಾಧ ಎಂದು ಪರಿಗಣಿಸಿ ಅಂತಹ ಟಿವಿ, ರೇಡಿಯೋಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗುವುದು ಎಂದು ಕ್ಸಿನ್‌ಹುವಾ ನ್ಯೂಸ್ ಏಜೆನ್ಸಿ ತಿಳಿಸಿದೆ.