ಅಫ್ಘಾನಿಸ್ತಾನ್ ಅಧ್ಯಕ್ಷ ಹಮೀದ್ ಕರ್ಜೈಯ್ ತಾಲಿಬಾನ್ ಮುಖಂಡರ ಜೊತೆಗಿನ ಶಾಂತಿ ಮಾತುಕತೆ ಪ್ರಸ್ತಾಪವನ್ನು ಸಾರಸಗಟಾಗಿ ತಳ್ಳಿಹಾಕಿದ್ದು, ಸಂಘಟನೆ ನಂ.2ಮುಖಂಡನನ್ನು ಸೆರೆ ಹಿಡಿದಿರುವ ಬಗ್ಗೆಯೂ ತಾಲಿಬಾನ್ ಕಿಡಿಕಾರಿದೆ.
ಶನಿವಾರ ಸಂಸತ್‌ನಲ್ಲಿ ಮಾತನಾಡಿದ ಕರ್ಜೈಯ್, ಶಾಂತಿ ಮಾತುಕತೆಯ ಪ್ರಸ್ತಾಪವನ್ನು ತಾಲಿಬಾನ್ ಸ್ವೀಕರಿಸಬೇಕೆಂದು ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದರು.
ತಾಲಿಬಾನ್ ಉಗ್ರಗಾಮಿ ಸಂಘಟನೆಯ ನಂ.2ಮುಖಂಡನ ಬಂಧನ ಹಾಗೂ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ವಿರುದ್ಧ ಕಿಡಿಕಾರಿರುವ ತಾಲಿಬಾನ್, ಕರ್ಜೈಯ್ ನೀಡಿರುವ ಶಾಂತಿ ಮಾತುಕತೆ ಪ್ರಸ್ತಾಪವನ್ನು ತಿರಸ್ಕರಿಸಿದೆ. ಆ ನಿಟ್ಟಿನಲ್ಲಿ ವಿದೇಶಿ ಮಿಲಿಟರಿ ಪಡೆಗಳು ಮೊದಲು ಅಫ್ಘಾನಿಸ್ತಾನದಿಂದ ಹೊರಹೋಗಬೇಕೆಂದು ಆಗ್ರಹಿಸಿದೆ.
ಹಮೀದ್ ಕರ್ಜೈಯ್ ಕೈಗೊಂಬೆಯಾಗಿದ್ದು, ಅವರು ದೇಶದ ಅಥವಾ ಸರ್ಕಾರದ ಪ್ರತಿನಿಧಿಯಾಗಿಲ್ಲ ಎಂದು ತಾಲಿಬಾನ್ ವಕ್ತಾರ ಖ್ವಾರಿ ಮೊಹಮ್ಮದ್ ಯೂಸೂಫ್ ಆಕ್ರೋಶ ವ್ಯಕ್ತಪಡಿಸಿದ್ದಾನೆ.