ಬೇರೆ ಪುರುಷರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮೂವರು ಅವಿವಾಹಿತ ಮಹಿಳೆಯರಿಗೆ ಕೋರ್ಟ್ ಛಡಿ ಏಟು ಶಿಕ್ಷೆ ನೀಡಿರುವ ವಿಚಿತ್ರ ಘಟನೆ ಮಲೇಶ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ನಡೆದಿದೆ.
ಇಸ್ಲಾಮಿಕ್ ಕಾನೂನಿನ ಪ್ರಕಾರ ಆ ರೀತಿಯ ಅನೈತಿಕ ಸಂಬಂಧ ಶಿಕ್ಷಾರ್ಹ ಅಪರಾಧವಾಗಿದ್ದರಿಂದ ಈ ಶಿಕ್ಷೆ ವಿಧಿಸಲಾಗಿದೆ. ಅವರು ಬೇರೆ ಪುರುಷರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಮಹಿಳೆಯರಿಗೆ ಇತ್ತೀಚೆಗೆ ಛಡಿ ಏಟಿನ ಶಿಕ್ಷೆ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ ಇಂತಹ ಘಟನೆಗಳು ಇಸ್ಲಾಂ ಧರ್ಮದ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡುವ ಸಂಗತಿಗಳಾಗಿವೆ ಎಂದು ಮಲೇಶಿಯಾದ ಗೃಹ ಸಚಿವ ಹಿಶಾಮುದ್ದೀನ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಶಿಕ್ಷೆ ಅಪರಾಧಿಗಳಿಗೆ ಎಚ್ಚರಿಕೆ ಗಂಟೆಯಾಗಿದ್ದು, ಭವಿಷ್ಯದಲ್ಲಿ ವ್ಯಕ್ತಿತ್ವ ಕಾಯ್ದುಕೊಂಡು ಉತ್ತಮ ಬದುಕು ಸಾಗಿಸಲು ನೆರವಾಗಲಿದೆ ಎಂದು ನಾವು ಭಾವಿಸಿದ್ದೇವೆ ಎಂದು ಹೇಳಿದರು.