ಮುಸ್ಲಿಂ ಮಹಿಳೆಯರು ದೇಶದಲ್ಲಿ ಬುರ್ಖಾ ಧರಿಸದಿರುವ ನಿಲುವನ್ನು ಒಪ್ಪುವಂತೆ ಬ್ರಿಟನ್ ಮುಖಂಡರೊಬ್ಬರು ಸಲಹೆ ನೀಡಿದ್ದು, ಆದರೆ ನಿಮಗೆ (ಸರ್ಕಾರ) ಬುರ್ಖಾದ ವಿರುದ್ಧ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಮುಸ್ಲಿಂ ಮಹಿಳೆಯರು ಬ್ರಿಟನ್‌ನಲ್ಲಿ ಬುರ್ಖಾ ಧರಿಸದಂತೆ ಜಸ್ಟೀಸ್ ಸೆಕ್ರೆಟರಿ ಜಾಕ್ ಸ್ಟ್ರಾವ್ ಅವರು ಸಲಹೆ ನೀಡಿರುವುದಾಗಿ ಮಾಧ್ಯಮವೊಂದರ ವರದಿ ತಿಳಿಸಿದೆ.
ಬುರ್ಖಾ ಧರಿಸದಿರುವುದನ್ನು ಬ್ರಿಟನ್ ಮುಸ್ಲಿಂ ಮಹಿಳೆಯರು ಒಪ್ಪುವಂತೆ ನಾನು ಸೂಚಿಸುತ್ತೇನೆ. ಆದರೆ ಅದಕ್ಕೆ ನಿಷೇಧ ಹೇರಲು ಸಾಧ್ಯವಿಲ್ಲ. ಈ ನಿಷೇಧ ಕಾನೂನು ಫ್ರಾನ್ಸ್‌ನಲ್ಲಿ ನಡೆಯಬಹುದು, ಆದರೆ ಬ್ರಿಟನ್‌ನಲ್ಲಿ ಅದು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ವರದಿ ಹೇಳಿದೆ.
ಪಾಶ್ಚಾತ್ಯ ಕೆಲವು ರಾಷ್ಟ್ರಗಳಲ್ಲಿ ಬುರ್ಖಾ ನಿಷೇಧಕ್ಕೆ ಮುಂದಾಗಿದ್ದು, ಪರ-ವಿರೋಧ ಚರ್ಚೆ ನಡೆಯುತ್ತಿದೆ. ಆದರೆ ಫ್ರಾನ್ಸ್ ಸರ್ಕಾರ ಬುರ್ಖಾ ನಿಷೇಧಕ್ಕೆ ಮುಂದಾಗಿರುವ ಬೆನ್ನಲ್ಲೇ, ಬ್ರಿಟನ್‌ನಲ್ಲಿ ಬುರ್ಖಾ ಧರಿಸದಿರುವಂತೆ ಜಾಕ್ ಸಲಹೆ ನೀಡಿದ್ದಾರೆ.