ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕವನದ ಮೂಲಕ ಒಬಾಮಾಗೆ ಬೆದರಿಕೆ; ಅಮೆರಿಕನ್ ಸೆರೆ (USA | web poem | Barack Obama | Johnny Logan Spencer Jr)
Bookmark and Share Feedback Print
 
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಮೊದಲ ಮಹಿಳೆ ಮಿಚ್ಚೆಲ್ ಒಬಾಮಾರಿಗೆ ಬೆದರಿಕೆಯೊಡ್ಡುವ ಅರ್ಥಗಳನ್ನೊಳಗೊಂಡ ಕವನವೊಂದನ್ನು ಬಿಳಿಯರ ಪ್ರಾಬಲ್ಯದ ವೆಬ್‌ಸೈಟ್‌ವೊಂದರಲ್ಲಿ ಪ್ರಕಟಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

'ನ್ಯೂಸಾಕ್ಸಾನ್.ಆರ್ಗ್' ಎಂಬ ವೆಬ್‌ಸೈಟಿನಲ್ಲಿ 27ರ ಹರೆಯ ಜಾನಿ ಲೋಗಾನ್ ಸ್ಪೆನ್ಸರ್ ಜೂನಿಯರ್ ಎಂಬಾತ 'ದಿ ಸ್ನಿಪರ್' ಎಂದು ನೀಡಲಾದ ಶೀರ್ಷಿಕೆಯಡಿಯಲ್ಲಿ ಕವನವೊಂದನ್ನು ಪೋಸ್ಟ್ ಮಾಡಿದ್ದ.

ಈ ವೆಬ್‌ಸೈಟನ್ನು 'ಬಿಳಿಯರಿಂದಾಗಿ ಬಿಳಿಯರಿಗಾಗಿರುವ ಆನ್‌ಲೈನ್ ಸಮುದಾಯ' ಎಂದು ಬಣ್ಣಿಸಲಾಗಿದೆ. ಈ ಕವನವನ್ನು 2007ರ ಆಗಸ್ಟ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು ಎಂದು ಪೊಲೀಸ್ ದಾಖಲೆಗಳು ವಿವರಣೆ ನೀಡಿವೆ.

ಜಾನಿಯನ್ನು ಅಮೆರಿಕಾದ ಮ್ಯಾಜಿಸ್ಟ್ಟೇಟ್ ನ್ಯಾಯಾಧೀಶ ಡೇವ್ ವಾಲಿನ್ ಅವರು 25,000 ಅಮೆರಿಕನ್ ಡಾಲರ್ ಮೊತ್ತದ ಆಧಾರದಲ್ಲಿ ಬಿಡುಗಡೆ ಮಾಡಿದ್ದಾರೆ. ಆದರೆ ಆತನ ಕುಟುಂಬದವರು ನೆಲೆಸಿರುವ ಮನೆಯಲ್ಲಿ ಗೃಹಬಂಧನದಲ್ಲಿಡಲು ಆದೇಶ ನೀಡಿದ್ದಾರೆ.

ಈ ಕವನದ ಬಣ್ಣನೆಯ ಪ್ರಕಾರ ಬಂದೂಕುದಾರಿಯೊಬ್ಬ ನಿರಂಕುಶ ರಾಜನನ್ನು ಶೂಟ್ ಮಾಡಿ ಕೊಂದು ಹಾಕುತ್ತಾನೆ. ನಂತರ ಆತನನ್ನು ಅಧ್ಯಕ್ಷರು ಎಂದು ಗುರುತಿಸಲಾಗುತ್ತದೆ ಎಂದು ವರದಿಗಳು ಹೇಳಿವೆ.

ಅಮೆರಿಕಾದ ಅಧ್ಯಕ್ಷ ಸ್ಥಾನಕ್ಕೆ ಕರಿಯ ವ್ಯಕ್ತಿಯೊಬ್ಬ ಏರುತ್ತಿರುವುದನ್ನು ಒಂದು ವರ್ಗದ ಬಿಳಿಯರು ತೀವ್ರವಾಗಿ ವಿರೋಧಿಸಿದ್ದರೂ, ಅಷ್ಟೇ ಪ್ರಮಾಣದಲ್ಲಿ ಬೆಂಬಲ ಕೂಡ ವ್ಯಕ್ತಪಡಿಸಿದ್ದರು. ಆದರೂ ಒಬಾಮಾ ಅಧ್ಯಕ್ಷರಾದ ಮೇಲೂ ಅವರ ಮೇಲೆ ದಾಳಿ ನಡೆಸಲು ಕೆಲವು ಬಿಳಿಯರು ಯೋಜನೆಗಳು ರೂಪಿಸುತ್ತಿರುವುದು ಬಹಿರಂಗವಾಗುತ್ತಿವೆ. ಇದೇ ರೀತಿಯ ದ್ವೇಷ ಹುಟ್ಟಿಸುವ ಕೃತ್ಯವನ್ನೆಸಗಿದ ಆರೋಪವನ್ನು ಜಾನಿಯ ಮೇಲೆ ಹೊರಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ