ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶ್ರೀಲಂಕಾ ಸಂಸತ್ ಚುನಾವಣೆಗೂ ಸ್ಪರ್ಧಿಸಲಿರುವ ಫೊನ್ಸೇಕಾ (Parliamentary Election | Gen Sarath Fonseka | Sri Lanka | Army)
Bookmark and Share Feedback Print
 
ಪ್ರಸಕ್ತ ಸೇನೆಯ ವಶದಲ್ಲಿರುವ ಅಧ್ಯಕ್ಷೀಯ ಚುನಾವಣೆಯ ಪರಾಜಿತ ಅಭ್ಯರ್ಥಿ ಜನರಲ್ ಸರತ್ ಫೊನ್ಸೇಕಾ ಏಪ್ರಿಲ್ 8ರಂದು ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಡೆಮಾಕ್ರಟಿಕ್ ನ್ಯಾಷನಲ್ ಅಲಯೆನ್ಸ್ (ಡಿಎನ್ಎ) ಕೂಟವನ್ನು ಮುನ್ನಡೆಸಲಿದ್ದಾರೆ.

ಜನರಲ್ ಫೊನ್ಸೇಕಾ ಅವರು ಜೆವಿಪಿ ನೇತೃತ್ವದ ಡೆಮಾಕ್ರಟಿಕ್ ನ್ಯಾಷನಲ್ ಅಲಯೆನ್ಸ್ ಕೂಟವನ್ನು ಮುನ್ನಡೆಸುತ್ತಾರೆ ಮತ್ತು ಕೊಲೊಂಬೊ ಜಿಲ್ಲೆಯಿಂದ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಜೆವಿಪಿ ಹಿರಿಯ ನಾಯಕ ವಿಜಿತಾ ಹೆರಾತ್ ತಿಳಿಸಿದ್ದಾರೆ.

ಅಧ್ಯಕ್ಷ ಮಹೀಂದ್ರಾ ರಾಜಪಕ್ಷೆ ಮತ್ತು ಅವರ ಕುಟುಂಬಸ್ಥರನ್ನು ಹತ್ಯೆಗೈಯಲು 59ರ ಹರೆಯ ಫೊನ್ಸೇಕಾ ಮಿಲಿಟರಿ ಮುಖ್ಯಸ್ಥರಾಗಿದ್ದಾಗ ಯತ್ನಿಸಿದ್ದರು ಎಂಬ ಆರೋಪದಲ್ಲಿ ಫೆಬ್ರವರಿ 8ರಂದು ಬಂಧಿಸಲಾಗಿದ್ದು, ಇದೀಗ ಮಿಲಿಟರಿ ವಶದಲ್ಲಿದ್ದಾರೆ.

ಫೊನ್ಸೇಕಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದನ್ನು ಅವರ ಪತ್ನಿ ಅನೋಮಾ ಕೂಡ ಖಚಿತಪಡಿಸಿದ್ದಾರೆ. ಆದರೆ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಸರಕಾರ ಅವಕಾಶ ನೀಡುತ್ತದೆಯೇ ಎಂಬುದು ಇನ್ನೂ ಖಚಿತಗೊಂಡಿಲ್ಲ.

ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆಯವರ ನೇತೃತ್ವದ ಯುನೈಟೆಡ್ ನ್ಯಾಷನಲ್ ಫ್ರಂಟ್ ಜತೆ ಮಾತುಕತೆಗೆ ತಾವು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಹೇರಾತ್, 'ನಾವು ಯಾವತ್ತೂ ಮುಕ್ತ ಸಮಾಲೋಚನೆಗೆ ಸಿದ್ಧ. ಆದರೆ ಈ ಹಿಂದಿನ ಪ್ರಯತ್ನಗಳು ವಿಫಲಗೊಂಡಿವೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನಾವು ಯುನೈಟೆಡ್ ನ್ಯಾಷನಲ್ ಪಾರ್ಟಿ ಮತ್ತು ಅದರ ಮಿತ್ರ ಪಕ್ಷಗಳ ಜತೆ ಯಾವುದೇ ಮಾತುಕತೆಗಳನ್ನು ಇದುವರೆಗೂ ನಡೆಸಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಆದರೆ ಅದಕ್ಕೆ ನಡೆಸಿದ ಯತ್ನಗಳೆಲ್ಲ ವಿಫಲವಾಗಿವೆ. ಅವರಿಂದ ಆಹ್ವಾನ ಬಂದಲ್ಲಿ ಮಾತುಕತೆ ನಡೆಸಲು ನಾವಂತೂ ಸಿದ್ಧರಿದ್ದೇವೆ ಎಂದು ಹೇರಾತ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ