ಸಾವಿನ ಸಂಖ್ಯೆ ಹೆಚ್ಚಳ
ಮೆಕ್ಸಿಕೋ: ಕಳೆದ ತಿಂಗಳು ಸಂಭವಿಸಿದ ಹೈಟಿಯಲ್ಲಿನ ಘೋರ ಭೂಕಂಪಕ್ಕೆ ಒಟ್ಟು ಬಲಿಯಾದವರ ಸಂಖ್ಯೆ ಮೂರು ಲಕ್ಷಕ್ಕೆ ತಲುಪಬಹುದು ಎಂದು ಹೈಟಿ ಅಧ್ಯಕ್ಷ ರೇನೇ ಪ್ರೆವಲ್ ತಿಳಿಸಿದ್ದಾರೆ. ಅವಶೇಷಗಳಡಿಯಲ್ಲಿ ಸಿಲುಕಿ ಸತ್ತವರ ಅಂದಾಜು ಇನ್ನೂ ನಮಗೆ ಸಿಕ್ಕಿಲ್ಲ. ಅವರನ್ನೂ ಲೆಕ್ಕ ಹಾಕಿದರೆ ಈ ಮೊತ್ತಕ್ಕೆ ಮುಟ್ಟಬಹುದಾಗಿದೆ ಎಂದಿದ್ದಾರೆ.