ಮೆಲ್ಬೊರ್ನ್, ಮಂಗಳವಾರ, 23 ಫೆಬ್ರವರಿ 2010( 10:14 IST )
ಆಸ್ಟ್ರೇಲಿಯಾದ ಬೀದಿಗಳು ಭಾರತೀಯರಿಗೆ ಸುರಕ್ಷಿತವಲ್ಲ ಎಂದಿರುವ ಆಸೀಸ್ ವಿರೋಧ ಪಕ್ಷದ ನಾಯಕ ಟೋನಿ ಅಬೊಟ್ಟ್, ಆ ನಿಟ್ಟಿನಲ್ಲಿ ಸರ್ಕಾರ ಭಾರತೀಯರ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿ ತಡೆಗಟ್ಟುವ ಬಗ್ಗೆ ಕ್ರಮ ಕೈಗೊಳ್ಳುವ ಮೂಲಕ ಉಭಯ ರಾಷ್ಟ್ರಗಳ ಸಂಬಂಧವನ್ನು ಉತ್ತಮಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ಆಸ್ಟ್ರೇಲಿಯಕ್ಕೆ ಭೇಟಿ ನೀಡಲಿರುವ ಭಾರತೀಯ ಪತ್ರಕರ್ತರ ತಂಡಕ್ಕೆ ಸರ್ಕಾರ ಭಾರೀ ಮೊತ್ತದ ವ್ಯಯಿಸಿ ವಸತಿ ವ್ಯವಸ್ಥೆ ಮಾಡುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ, ಟೋನಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯರ ಮೇಲೆ ನಿರಂತವಾಗಿ ನಡೆದ ಜನಾಂಗೀಯ ಹಲ್ಲೆಯ ನಂತರ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ. ಆಸೀಸ್‌ಗೆ ಆಗಮಿಸಲಿರುವ ಭಾರತೀಯ ಮಾಧ್ಯಮ ತಂಡಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅವರ ವಾಸ್ತವ್ಯ ಮತ್ತು ಪ್ರಯಾಣಕ್ಕಾಗಿ ಸುಮಾರು 250,000ಡಾಲರ್‌ನಷ್ಟು ಹಣವನ್ನು ವ್ಯಯಿಸುತ್ತಿದೆ.
ಸುಮಾರು 25ಮಂದಿ ಭಾರತೀಯ ಪತ್ರಕರ್ತರು ಮೆಲ್ಬೊರ್ನ್ ಕ್ರಿಕೆಟ್ ಗ್ರೌಂಡ್ ಮತ್ತು ಬಾಲಿವುಡ್‌ನ ಖ್ಯಾತ ಸಂಗೀತಗಾರ ಎ.ಆರ್.ರೆಹಮಾನ್ ಅವರ ಸಿಡ್ನಿ ಮತ್ತು ಮೆಲ್ಬೊರ್ನ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕಾಗಿ ಆಸ್ಟ್ರೇಲಿಯಾಕ್ಕೆ ಆಗಮಿಸುತ್ತಿದ್ದಾರೆ.
ಕೇವಲ ಭಾರತೀಯ ಪತ್ರಕರ್ತರ ಆಗಮನಕ್ಕಾಗಿ ಇಷ್ಟೊಂದು ಮೊತ್ತದ ಹಣವನ್ನು ಖರ್ಚು ಮಾಡುವ ಬದಲು ಆಸೀಸ್ ಸರ್ಕಾರ, ನೈತಿಕ ಪೊಲೀಸ್ ಕೆಲಸ ಮಾಡುತ್ತಿರುವ ಮತ್ತು ಜನಾಂಗೀಯ ದಾಳಿ ನಡೆಸುವುದನ್ನು ತಡೆಗಟ್ಟಲು ವ್ಯಯಿಸಿದರೆ ಇದರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧಕ್ಕೆ ಸಹಕಾರಿಯಾಗಲಿದೆ ಎಂದು ಟೋನಿ ಹೇಳಿದರು.