ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್, ಇರಾಕ್‌ಗಳಲ್ಲಿ ಅಮೆರಿಕಾದ 5,500 ಯೋಧರ ಸಾವು (Afghanistan | US soldiers | US military | Taliban)
Bookmark and Share Feedback Print
 
ಹತ್ತು ವರ್ಷಗಳಿಂದ ಅಫಘಾನಿಸ್ತಾನದಲ್ಲಿ ಹಾಗೂ ಎಂಟು ವರ್ಷಗಳಿಂದ ಇರಾಕ್‌ನಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುತ್ತಿರುವ ಅಮೆರಿಕಾ ಸೋಮವಾರದವರೆಗೆ 5,378 ಸೈನಿಕರನ್ನು ಕಳೆದುಕೊಂಡಿದೆ ಎಂದು ವೆಬ್‌ಸೈಟ್‌ವೊಂದು ವರದಿ ಮಾಡಿದೆ.

ಇರಾಕ್ ಮತ್ತು ಅಫಘಾನಿಸ್ತಾನಗಳಲ್ಲಿ ಸಾವನ್ನಪ್ಪುವ ಮಿಲಿಟರಿ ಸಂಖ್ಯೆಯನ್ನು ಪ್ರಕಟಿಸುವ ಸ್ವತಂತ್ರ ವೆಬ್‌ಸೈಟ್ 'icasualties.org' ಇದನ್ನು ವರದಿ ಮಾಡಿದೆ.

ಈ ವರ್ಷ ಇದುವರೆಗೆ ಅಫ್ಘಾನ್‌ನಲ್ಲಿ 54 ಅಮೆರಿಕಾ ಯೋಧರು ಸಾವನ್ನಪ್ಪಿದ್ದಾರೆ. ಕಳೆದ ವರ್ಷ 316 ಮಂದಿ ಸತ್ತಿದ್ದರು ಎಂದು ಇದರಲ್ಲಿನ ದಾಖಲೆಗಳು ತೋರಿಸುತ್ತಿವೆ.

2001ರಲ್ಲಿ 12, 2002ರಲ್ಲಿ 49, 2003ರಲ್ಲಿ 48, 2004ರಲ್ಲಿ 52, 2005ರಲ್ಲಿ 99, 2006ರಲ್ಲಿ 98, 2007ರಲ್ಲಿ 117, 2008ರಲ್ಲಿ 155, 2009ರಲ್ಲಿ 316 ಹಾಗೂ 2010ರಲ್ಲಿ ಇದುವರೆಗೆ 54 ಮಂದಿ ಅಮೆರಿಕಾ ಯೋಧರು ಜೀವ ತೆತ್ತಿದ್ದಾರೆ.

ಒಟ್ಟಾರೆ ಅಫಘಾನಿಸ್ತಾನ ಯುದ್ಧಭೂಮಿಯಲ್ಲಿ ಅಮೆರಿಕಾದ 1,000 ಮಂದಿ ಸೇರಿದಂತೆ, ಬ್ರಿಟನ್‌ನ 264 ಯೋಧರು ಹಾಗೂ ಇತರ ದೇಶಗಳ 393 ಸೈನಿಕರು (1657) ಇದುವರೆಗೆ ಸಾವನ್ನಪ್ಪಿದ್ದಾರೆ.

ಆದರೆ ಇರಾಕ್‌ನಲ್ಲಿ ಅಮೆರಿಕಾ ಭಾರೀ ನಷ್ಟ ಅನುಭವಿಸಿದೆ. ಅಲ್ಲಿ ಇದುವರೆಗೆ ಅಮೆರಿಕಾವು 4,378 ಯೋಧರನ್ನು ಕಳೆದುಕೊಂಡಿದೆ. ಬ್ರಿಟನ್ 179 ಹಾಗೂ ಇತರ ದೇಶಗಳು 139 ಸೇರಿದಂತೆ ಒಟ್ಟಾರೆ ಸಾವನ್ನಪ್ಪಿದ ಸೈನಿಕರ ಸಂಖ್ಯೆ 4696ಕ್ಕೆ ತಲುಪಿದೆ.

2003ರಲ್ಲಿ 486, 2004ರಲ್ಲಿ 849, 2005ರಲ್ಲಿ 846, 2006ರಲ್ಲಿ 822, 2007ರಲ್ಲಿ 904, 2008ರಲ್ಲಿ 314, 2009ರಲ್ಲಿ 149 ಹಾಗೂ ಈ ವರ್ಷ ಇದುವರೆಗೆ 8 ಸೈನಿಕರು ಬಲಿದಾನಗೈದಿದ್ದಾರೆ ಎಂದು ವೆಬ್‌ಸೈಟ್ ವಿವರಣೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ