ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯ ಸಿಖ್ಖರ ಯಾತ್ರೆ ಕಡಿತಗೊಳಿಸಿದ ಪಾಕಿಸ್ತಾನ (Indian Sikh pilgrims | Pakistan | Gurdwara Panja Sahib | Sikh yatri)
Bookmark and Share Feedback Print
 
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನೈಋತ್ಯ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್ ಭಯೋತ್ಪಾದಕರು ಇಬ್ಬರು ಸಿಖ್ಖರ ಶಿರಚ್ಛೇದನ ಮಾಡಿದ ಬಳಿಕ ಕ್ರಮಕ್ಕೆ ಮುಂದಾಗಿರುವ ಅಲ್ಲಿನ ಸರಕಾರ, ಹಸನಬ್ದಾಲ್ ನಗರದಲ್ಲಿನ ಗುರುದ್ವಾರ ಪಂಜಾ ಸಾಹೀಬ್‌ಗೆ ಭಾರತೀಯರು ಕೈಗೊಳ್ಳುವ ಯಾತ್ರೆಯನ್ನು ಕಡಿತಗೊಳಿಸಿದೆ.

ಭದ್ರತಾ ಕಾರಣಗಳಿಂದಾಗಿ ಇಲ್ಲಿಗೆ ಪ್ರವಾಸ ಮಾಡುವ ಭಾರತೀಯ ಸಿಖ್ಖರ ಯಾತ್ರೆಯನ್ನು ಮೂರು ದಿನಗಳಿಂದ ಒಂದು ದಿನಕ್ಕೆ ಇಳಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಹಸನಬ್ದಾಲ್‌ಗೆ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲು ಸಿಖ್ಖರು ಪ್ರಯಾಣ ಬೆಳೆಸುತ್ತಾರೆ.

ಈ ಹಿಂದೆ ಸಿಖ್ಖರು ಹಸನಬ್ದಾಲ್‌ನಲ್ಲಿ ಮೂರು ದಿನಗಳ ಕಾಲ ತಂಗಿ, 'ಸಾಕಾ ನಾಂಕನಾ ಸಾಹೀಬ್ ಪುಣ್ಯತಿಥಿ'ಯಲ್ಲಿ ಪಾಲ್ಗೊಳ್ಳುತ್ತಿದ್ದ ಯಾತ್ರೆಯನ್ನು ಭಾರತ ವಿಭಜನೆಯಾದ ನಂತರ ಎರಡನೇ ಬಾರಿಗೆ ತೀವ್ರ ಲಕ್ಷ್ಯವಿಡಲಾಗುತ್ತಿದೆ.

ಖೈಬರ್ ಬುಡಕಟ್ಟು ಪ್ರಾಂತ್ಯದಲ್ಲಿ ಇಬ್ಬರು ಸಿಖ್ಖರನ್ನು ತಾಲಿಬಾನ್ ಭಯೋತ್ಪಾದಕರು ಕೊಂದು ಹಾಕಿರುವುದರಿಂದ ಯಾತ್ರಾರ್ಥಿಗಳು ತಮ್ಮ ಯಾತ್ರೆಯನ್ನು ಮೂರು ದಿನಗಳಿಂದ ಒಂದು ದಿನಕ್ಕೆ ಕಡಿತಗೊಳಿಸಬೇಕು ಎಂದು ಇಲ್ಲಿನ ಭದ್ರತಾ ಅಧಿಕಾರಿಯೊಬ್ಬರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆದರೆ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಸಮುದಾಯಗಳ ತೀರ್ಥಕ್ಷೇತ್ರಗಳ ನಿರ್ವಹಣೆ ಮತ್ತು ಯಾತ್ರಾರ್ಥಿಗಳಿಗೆ ವ್ಯವಸ್ಥೆಗಳನ್ನು ಮಾಡಿಕೊಡುವ ಜವಾಬ್ದಾರಿ ಹೊತ್ತಿರುವ 'ನಿರ್ವಸತಿಗರ ಟ್ರಸ್ಟ್ ಪ್ರಾಪರ್ಟಿ ಬೋರ್ಡ್'ಗೆ ಅಧಿಕಾರಿಗಳ ಕ್ರಮದ ಕುರಿತು ಯಾವುದೇ ಮಾಹಿತಿಯಿಲ್ಲ. ಯಾತ್ರೆಯನ್ನು ಕಡಿತಗೊಳಿಸಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಆದರೆ ಸಿಖ್ ಯಾತ್ರಾರ್ಥಿಗಳಿಗೆ ಗರಿಷ್ಠ ಬೆದರಿಕೆಯಿರುವುದನ್ನು ಭದ್ರತಾ ಪಡೆಗಳು ಬೆಟ್ಟು ಮಾಡಿ ತೋರಿಸಿದ್ದವು ಎಂದು ಅವರು ಹೇಳಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ