ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದ ಮೇಲೆ ದಾಳಿ ನಡೆಸದೆ ಬಿಡೋಲ್ಲಾ: ಅಲ್ ಖಾಯಿದಾ (Qasim al-Raimi | Al-Qaida | Yemen | US attacks | America)
Bookmark and Share Feedback Print
 
ಕಳೆದ ವರ್ಷ ಕ್ರಿಸ್ಮಮಸ್ ದಿನದಂದು ಅಮೆರಿಕದ ಪ್ರಯಾಣಿಕ ವಿಮಾನ ಸ್ಫೋಟದ ವಿಫಲ ಸಂಚಿನ ಹೊಣೆಯನ್ನು ಹೊತ್ತಿರುವ ಯೆಮೆನ್‌ನ ಅಲ್ ಖಾಯಿದಾ ಜಾಲದ ಸಂಘಟನೆ, ಅಮೆರಿಕದ ಮೇಲೆ ಮತ್ತಷ್ಟು ದಾಳಿ ನಡೆಸದೇ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿವೆ.

ಯೆಮೆನ್‌ನಲ್ಲಿರುವ ಅಲ್ ಖಾಯಿದಾ ಸಂಘಟನೆಯ ದಾಳಿ ಎಚ್ಚರಿಕೆಯನ್ನು ರವಾನಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಮತ್ತಷ್ಟು ಕಳವಳಕ್ಕೆ ಈಡು ಮಾಡಿದೆ. ಅಲ್ ಖಾಯಿದಾ ಸಂಘಟನೆ ಬಹಿರಂಗವಾಗಿಯೇ ಅಮೆರಿಕದ ವಿರುದ್ಧ ಸೆಡ್ಡು ಹೊಡೆದಿದ್ದು, ಡಿಸೆಂಬರ್ 25ರಂದು ಅಮೆರಿಕದ ವಿಮಾನ ಸ್ಫೋಟಿಸುವ ಸಂಚು ನಡೆಸಿ ವಿಫಲವಾಗಿತ್ತು.

ಅರೆಬಿಯನ್ ಪ್ರಾಂತ್ಯದ ಅಲ್ ಖಾಯಿದಾದ ಪ್ರಮುಖ ಕಮಾಂಡರ್ ಖ್ವಾಸಿಮ್ ಅಲ್ ರೈಮಿ, ಅಮೆರಿಕದ ಕೊಲೆಗಡುಕತಕ್ಕೆ ತಕ್ಕ ಪ್ರತಿಕಾರ ನಡೆಸುವುದಾಗಿ ಉಗ್ರ ಸಂಘಟನೆಯ ಆನ್‌ಲೈನ್‌ ಮ್ಯಾಗಜೀನ್‌ನ ಲೇಖನದಲ್ಲಿ ಕಿಡಿಕಾರಿದ್ದಾನೆ.

ನಮ್ಮ ಮಣ್ಣಿನ ಮೇಲೆ ನೀವು ದಾಳಿ ನಡೆಸಿ, ನಂತರ ಕಾದು ನೋಡಿ ನಿಮ್ಮ ವಿರುದ್ಧವೇ ಯಾವ ರೀತಿ ದಾಳಿ ಮಾಡುತ್ತೇವೆ ಎಂದು ರೈಮಿ ಗುಡುಗಿದ್ದಾನೆ. ಅಮೆರಿಕ ತನ್ನ ಕೊಲೆಗಡುಕ ನೀತಿಯಿಂದ ಅಲ್ ಖಾಯಿದಾ ವಿರುದ್ಧ ಸಮರ ಸಾರಿದೆ. ನಾವೂ ಕೂಡ ಅಮೆರಿಕದ ಮೇಲೆ ದಾಳಿ ನಡೆಸದೇ ವಿರಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ