ತೆಹ್ರಾನ್ ಮೇಲೆ ಹೆಚ್ಚಿನ ನಿರ್ಬಂಧ ಹೇರುವ ನಿಟ್ಟಿನಲ್ಲಿ ಇರಾನ್‌ಗೆ ನೀಡಿರುವ ಗಡುವು ಮುಕ್ತಾಯಗೊಂಡಿರುವ ನೆಲೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಸಮಯ ಮತ್ತು ತಾಳ್ಮೆ ಮೀರುತ್ತಿದೆ ಎಂದು ಶ್ವೇತಭವನ ತಿಳಿಸಿದೆ.
ನ್ಯೂಕ್ಲಿಯರ್ ಪ್ರೋಗ್ರಾಂ ಅನ್ನು ಶಾಂತಿಯ ಪ್ರತೀಕವಾಗಿ ಬಳಸುವ ಒಪ್ಪಂದಕ್ಕೆ ಇರಾನ್ ನಕಾರ ವ್ಯಕ್ತಪಡಿಸುತ್ತಿದ್ದು, ಆ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಹಿತಾಸಕ್ತಿಯನ್ನು ಕಡೆಗಣಿಸುವ ಮೂಲಕ ಇರಾನ್ ಸರ್ವಾಧಿಕಾರದ ಧೋರಣೆಯನ್ನು ಪ್ರದರ್ಶಿಸುತ್ತಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ರೋಬೆರ್ಟ್ ಗಿಬ್ಸ್ ಹೇಳಿದ್ದಾರೆ.
ಇರಾನ್ ತನ್ನ ಜವಾಬ್ದಾರಿಯನ್ನು ಮರೆತು ನ್ಯೂಕ್ಲಿಯರ್ ತಯಾರಿಕೆಗೆ ಮುಂದಾಗಿದ್ದು ಇದರಿಂದಾಗಿ ಅಮೆರಿಕ ಮತ್ತು ವಿಶ್ವಸಂಸ್ಥೆಯ ಎಚ್ಚರಿಕೆಯನ್ನು ಕಡೆಗಣಿಸುತ್ತಿದೆ. ಆ ನಿಟ್ಟಿನಲ್ಲಿ ಇರಾನ್ ವಿರುದ್ಧ ನಿರ್ಬಂಧ ಹೇರಲು ಒಮ್ಮತದ ನಿರ್ಧಾರಕ್ಕೆ ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.