ಫ್ರಾನ್ಸ್:ವಿವಾದದ ಕಿಡಿ ಹೊತ್ತಿಸಿದ ಧೂಮಪಾನ ವಿರೋಧಿ ಜಾಹೀರಾತು!
ಪ್ಯಾರಿಸ್, ಬುಧವಾರ, 24 ಫೆಬ್ರವರಿ 2010( 19:05 IST )
ಧೂಮಪಾನ ವಿರೋಧಿ ಪ್ರಚಾರ ಕುರಿತಂತೆ ಪ್ರಕಟಿಸಲಾಗಿದ್ದ ಜಾಹೀರಾತಿನಲ್ಲಿ ಹದಿಹರೆಯದವರನ್ನು ಬಳಸಿಕೊಂಡಿರುವ ಅಂಶ ಫ್ರಾನ್ಸ್ ಮೇಲ್ಮನೆಯಲ್ಲಿ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಜಾಹೀರಾತಿನಲ್ಲಿನ ಭಾವಚಿತ್ರದ ಭಂಗಿ ಲೈಂಗಿಕ ಆರೋಪಕ್ಕೆ ಗುರಿಯಾಗಿದ್ದು, ಇದರಿಂದ ಆರೋಗ್ಯದ ಮೇಲಿನ ದುಷ್ಪರಿಣಾಮವನ್ನು ಬಿಂಬಿಸುವುದಕ್ಕಿಂತ ಹೆಚ್ಚಾಗಿ ಗಮನವನ್ನು ಬೇರೆಡೆಗೆ ಸೆಳೆಯುಂತಾಗಿದೆ ಎಂದು ದೂರಲಾಗಿದೆ.
ಧೂಮಪಾನ ವಿರೋಧಿ ಪ್ರಚಾರಕ್ಕಾಗಿ ಕಳೆದ ವಾರ ಪ್ರಕಟಿಸಿರುವ ಜಾಹೀರಾತಿನಲ್ಲಿ ವಯಸ್ಕನೊಬ್ಬ ತಲೆಯನ್ನು ಕೆಳಗೆ ಬಗ್ಗಿಸಿ ತನ್ನ ಬಾಯನ್ನು ಅಪ್ರಾಪ್ತ ವಯಸ್ಕನ ಬಾಯಿ ಮೂಲಕ ಸಿಗರೇಟು ಹೊತ್ತಿಸಿಕೊಳ್ಳುವಂತೆ ಚಿತ್ರಿಸಲಾಗಿದೆ. ಇದು ಮೌಖಿಕ ಸೆಕ್ಸ್‌ನ ಭಂಗಿಯಂತೆ ಕಾಣುತ್ತದೆ. ಅಲ್ಲದೇ ಅದರ ಕೆಳಗೆ ಧೂಮಪಾನವೆಂದರೆ ತಂಬಾಕಿನ ಗುಲಾಮನಾದಂತೆ ಎಂಬ ಸ್ಲೋಗನ್ ಬರೆಯಲಾಗಿದೆ ಎಂದು ಧೂಮಪಾನ ವಿರೋಧಿ ಹಕ್ಕುಗಳ ಸಂಘಟನೆ ಆರೋಪಿಸಿದೆ.
ಧೂಮಪಾನ ವಿರೋಧಿ ಪ್ರಚಾರಾಂದೋಲನದ ಜಾಹೀರಾತು ಲೈಂಗಿಕ ಪ್ರಚೋದನೆ ನೀಡುವಂತಿದೆ. ಇದು ನಿಜಕ್ಕೂ ಉತ್ತಮವಾದ ಅರಿವು ನೀಡುವ ಜಾಹೀರಾತಲ್ಲ ಎಂದು ಅದು ವಾದಿಸಿದೆ.